Heart diseases: 7 ಸೆಕೆಂಡುಗಳಲ್ಲಿ ಹೃದ್ರೋಗವನ್ನು ಪತ್ತೆ ಹಚ್ಚಬಹುದು: 14 ವರ್ಷದ ಬಾಲಕನ ಅದ್ಭುತ ಸಾಧನೆ

Heart diseases: ಕೇವಲ 14 ವರ್ಷ ವಯಸ್ಸಿನ ಸಿದ್ಧಾರ್ಥ್ ನಂದ್ಯಾಲ(Siddarth Nandyala) ಅವರು ಸರ್ಕಾಡಿಯಾವಿ(CircadiaV) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಅಪ್ಲಿಕೇಶನ್(App) ಅನ್ನು ರಚಿಸಿದ್ದಾರೆ. ಇದು ಕೇವಲ ಏಳು ಸೆಕೆಂಡುಗಳಲ್ಲಿ ಹೃದಯ ಕಾಯಿಲೆಗಳನ್ನು(Heart Problem) 96% ಕ್ಕಿಂತ ಹೆಚ್ಚು ನಿಖರತೆಯೊಂದಿಗೆ ಪತ್ತೆ ಹಚ್ಚುತ್ತದೆ!

ಈ ಅದ್ಭುತ ಆವಿಷ್ಕಾರವು ವೈದ್ಯರು ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚುವ ವಿಧಾನವನ್ನು ಬದಲಾಯಿಸಬಹುದು. ರೋಗನಿರ್ಣಯವನ್ನು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡಬಹುದು. ಕೃತಕ ಬುದ್ಧಿಮತ್ತೆಯನ್ನು ಬಳಸುವ ಮೂಲಕ, ಸರ್ಕಾಡಿಯಾವಿ ಹೃದಯದ ಆರೋಗ್ಯವನ್ನು ತ್ವರಿತವಾಗಿ ವಿಶ್ಲೇಷಿಸಬಹುದು. ಇದು ಆರಂಭದಲ್ಲೇ ರೋಗವನ್ನು ಪತ್ತೆಹಚ್ಚುವುಸರೊಂದಿಗೆ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.

ಸಿದ್ಧಾರ್ಥ್ ಅವರ ಆವಿಷ್ಕಾರವು ವೈದ್ಯಕೀಯ ತಂತ್ರಜ್ಞಾನಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದ್ದು, ಯುವಕರ ಇಂಥ ಸಾಧನೆಗಳು ಪ್ರಪಂಚದ ಮೇಲೆ ಭಾರಿ ಪರಿಣಾಮ ಬೀರಬಹುದು ಎಂದು ಸಾಬೀತುಪಡಿಸುತ್ತದೆ. ಅವರು ಸರ್ಕಾಡಿಯಾವಿ ಅನ್ನು ಸುಧಾರಿಸುವುದನ್ನು ಮುಂದುವರಿಸುತ್ತಿದ್ದಂತೆ, ಹೃದಯ ಆರೋಗ್ಯದ ಭವಿಷ್ಯವು ಎಂದಿಗಿಂತಲೂ ಪ್ರಕಾಶಮಾನವಾಗಿ ಕಾಣುತ್ತದೆ!

Comments are closed.