Global Warming: ವಿಶ್ವದಲ್ಲಿ “ಭಾರತ ಇಷ್ಟು ಬೇಗ ಬಿಸಿಯಾಗಲ್ಲ”: ತಾಪಮಾನ ಏರಿಕೆ ನಿಧಾನ: ಹಾರ್ವರ್ಡ್ ವಿಜ್ಞಾನಿ

Global Warming: ನಾಸಾದ(NASA) 40 ವರ್ಷಗಳ ದತ್ತಾಂಶವನ್ನು ಉಲ್ಲೇಖಿಸಿದ ಹಾರ್ವರ್ಡ್ ವಿವಿ ಯ(Harvard University) ಹವಾಮಾನ ವಿಜ್ಞಾನಿ(Scientist) ವಿಜ್ಞಾನ, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿ ಕಾರ್ಯಕ್ರಮದ ಸಹ-ನಿರ್ದೇಶಕ ಡೇನಿಯಲ್ ಪಿ ಶ್ರಾಗ್, ಭಾರತದ ತಾಪಮಾನ ಏರಿಕೆ ವಿಶ್ವದ ಇತರ ಭಾಗಗಳಿಗಿಂತ ನಿಧಾನವಾಗಿದೆ ಎಂದಿದ್ದಾರೆ. “ಮುಂದಿನ 20-40 ವರ್ಷಗಳಲ್ಲಿ ತಾಪಮಾನ ಏರಿಕೆ ಇನ್ನಷ್ಟು ವೇಗವಾಗುವ ನಿರೀಕ್ಷೆಯಿದೆ” ಎಂದು ಅವರು ಹೇಳಿದರು. “ಏರೋಸಾಲ್, ಮಾಲಿನ್ಯ ಶಾಖ ಹೊರಸೂಸುತ್ತದೆ. ಬೃಹತ್ ಕೃಷಿ ನೀರಾವರಿಯಿಂದಾಗಿ ಮಣ್ಣಿನ ತೇವಾಂಶ ಮತ್ತು ಆವಿಯಾಗುವಿಕೆ ಹೆಚ್ಚಾಗುತ್ತದೆ. ಹೀಗಾಗಿ ಭಾರತದ ತಾಪಮಾನ ಏರಿಕೆ ನಿಧಾನವಾಗಿರಬಹುದು” ಎಂದು ಅವರು ತಿಳಿಸಿದರು.
“ಹವಾಮಾನ ಸವಾಲು: ಮುಂದೆ ಏನಿದೆ?” ಎಂಬ ವಿಷಯದ ಕುರಿತು ಮಾತನಾಡಿದ ಶ್ರಾಗ್, ಜಾಗತಿಕ ತಾಪಮಾನವು ಶತಮಾನದ ಅಂತ್ಯದ ವೇಳೆಗೆ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 3.5 ರಿಂದ 4 ° C ವರೆಗೆ ಹೆಚ್ಚಾಗಬಹುದು ಎಂದು ಹೇಳಿದರು. “ಖಂಡಗಳು ಸಾಗರಗಳಿಗಿಂತ ವೇಗವಾಗಿ ಬಿಸಿಯಾಗುತ್ತಿವೆ. ಇದು ಮೂಲಭೂತ ಭೌತಶಾಸ್ತ್ರ. ಸಾಗರಗಳು ಶಾಖವನ್ನು ತೆಗೆದುಕೊಳ್ಳುತ್ತವೆ, ಅವು ದೈತ್ಯ ಹವಾನಿಯಂತ್ರಣಗಳಂತೆ. ಒಳ್ಳೆಯ ಸುದ್ದಿ ಎಂದರೆ ಸಾಗರಗಳಿಂದಾಗಿ ಭೂಮಿಯು ಅಷ್ಟು ಬೇಗ ಬಿಸಿಯಾಗಿಲ್ಲ ಮತ್ತು ಕೆಟ್ಟ ಸುದ್ದಿ ಎಂದರೆ ಹೆಚ್ಚು ಬಿಸಿಯಾಗಲಿದೆ” ಎಂದು ಶ್ರಾಗ್ ಹೇಳಿದರು. “ಯಾರೂ ನೋಡಿರದ ವಿಷಯಕ್ಕೆ ನಾವು ಸಿದ್ಧರಾಗಬೇಕು… ಇಂದಿನ ದಿನಕ್ಕೂ 2047ಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ.”
Comments are closed.