Drink and Drive: ಮದ್ಯಪಾನ ಮಾಡಿ ವಾಹನ ಚಾಲನೆ: ಐವರು ಚಾಲಕರಿಗೆ ತಲಾ 10,000 ದಂಡ

Drink and Drive: ಕುಶಾಲನಗರ ಸಂಚಾರ ಪೊಲೀಸ್ ಠಾಣಾ(Police station) ವ್ಯಾಪ್ತಿಯಲ್ಲಿ ಮಾ.18ರಂದು ಕೊಪ್ಪ ಗೇಟ್ ಬಳಿ ಮಧ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ವಾಹನ ಚಾಲಕರಾದ ಕಿರಣ್, ಗಣೇಶ್ ಎಚ್ ಆರ್, ಶಂಭು, ಕುಮಾರ, ವೆಂಕಟೇಶ್ ಇವರನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯಪಾನ ಸೇವಿಸಿ ವಾಹನ ಚಲಾವಣೆ ಮಾಡುತ್ತಿರುವುದು ದೃಢಪಟ್ಟಿದೆ.
ಈ ಪ್ರಕರಣದಲ್ಲಿ ಮಾನ್ಯ ಘನ ನ್ಯಾಯಾಲಯ ಸಿವಿಲ್ ಜಡ್ಜ್ & JMFC ಕೋರ್ಟ್(Court), ಕುಶಾಲನಗರ ವಾಹನ ಚಾಲಕರಿಗೆ ತಲಾ ₹10,000 ದಂತೆ ಒಟ್ಟು ₹50,000 ದಂಡವನ್ನು ವಿಧಿಸಿರುತ್ತಾರೆ. ಈ ಕಾರ್ಯಚಣೆಯಲ್ಲಿ ಪಿಎಸ್ಐ ರವರಾದ ಶ್ರೀ ಗಣೇಶ್, ಶ್ರೀ ಶ್ರೀನಿವಾಸ್ ಹಾಗೂ ಕುಶಾಲನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಭಾಗಿಯಾಗಿರುತ್ತಾರೆ.
Comments are closed.