Elephants: ವಿರಾಜಪೇಟೆ: ಬೇತ್ರಿಯಲ್ಲಿ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು

Elephants: ಆನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಮಡಿಕೇರಿ ಜಿಲ್ಲೆಯಲ್ಲಿ ದಿನಂ ಪ್ರತಿ ಒಂದಲ್ಲ ಒಂದು ಊರಿಗೆ ಕಾಡಾನೆಗಳು ನುಗ್ಗುತ್ತಲೇ ಇವೆ. ಪ್ರಾಣ ಹಾನಿ, ಬೆಳೆ ಹಾನಿ ಮಾಡುತ್ತಲೇ ಇವೆ. ಸರ್ಕಾರ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ.
ಕಳೆದ ರಾತ್ರಿ ಮಡಿಕೇರಿ ವಿರಾಜಪೇಟೆಯ ಮುಖ್ಯರಸ್ತೆಯ ಬೇತ್ರಿಯಲ್ಲಿ ಮುಕ್ಕಾಟ್ಟಿರ ಕಿಟ್ಟು ಮುತಣ್ಣ ಅವರ ಅಡಿಕೆ ಹಾಗೂ ಮಿಶ್ರ ಬೆಳೆ ತೋಟದಲ್ಲಿ ಕಾಡನೆಗಳು ಕಾಣಿಸಿಕೊಂಡಿದೆ. ಎರಡು ಆನೆಗಳೊಂದಿಗೆ ಮರಿ ಆನೆ ಕೂಡ ಇದ್ದು ಗ್ರಾಮಸ್ಥರು ಆನೆಗಳನ್ನು ಮುಂದೆ ಅಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.
Comments are closed.