Electric Vehicle: 6 ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಕಾರುಗಳ ಬೆಲೆಗೆ ಸಮ: ಕೇಂದ್ರ ಸಚಿವ ನಿತಿನ್ ಗಡ್ಕರಿ

Electric Vehicle: ಆರು ತಿಂಗಳೊಳಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬೆಲೆಗಳು ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಿರುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nithin Gadkari)ಹೇಳಿದ್ದಾರೆ. ಬದಲಿ ಆಮದು, ಮಾಲಿನ್ಯ ಮುಕ್ತ ಮತ್ತು ಸ್ಥಳೀಯ ಉತ್ಪಾದನೆಗಳು ಸರ್ಕಾರದ ನೀತಿ ಎಂದು ಸಚಿವರು ಹೇಳಿದರು. ಭಾರತವನ್ನು(India) ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು, ದೇಶವು ತನ್ನ ಮೂಲಸೌಕರ್ಯ ವಲಯವನ್ನು ಸುಧಾರಿಸಬೇಕಾಗಿದೆ ಎಂದು ಅವರು ಹೇಳಿದರು.

32ನೇ ಕನ್ವರ್ಜೆನ್ಸ್ ಇಂಡಿಯಾ ಮತ್ತು 10ನೇ ಸ್ಮಾರ್ಟ್ ಸಿಟೀಸ್ ಇಂಡಿಯಾ ಎಕ್ಸ್‌ಪೋವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, 212 ಕಿ.ಮೀ. ದೆಹಲಿ-ಡೆಹ್ರಾಡೂನ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇಯ ನಿರ್ಮಾಣ ಕಾರ್ಯವು ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

“ಉತ್ತಮ ರಸ್ತೆಗಳನ್ನು ಮಾಡುವ ಮೂಲಕ, ನಾವು ನಮ್ಮ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಬಹುದು” ಹಾಗೂ ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು, ದೇಶವು ತನ್ನ ಮೂಲಸೌಕರ್ಯ ವಲಯವನ್ನು ಸುಧಾರಿಸಬೇಕಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ದೇಶದ ಆರ್ಥಿಕತೆಯ ಭವಿಷ್ಯವು ತುಂಬಾ ಉತ್ತಮವಾಗಿದೆ ಮತ್ತು ಸರ್ಕಾರವು ಸ್ಮಾರ್ಟ್ ಸಿಟಿಗಳು ಮತ್ತು ಸ್ಮಾರ್ಟ್ ಸಾರಿಗೆಯ ಕಡೆಗೆ ಬದ್ಧವಾಗಿದೆ ಎಂದು ಗಡ್ಕರಿ ಪ್ರತಿಪಾದಿಸಿದರು. “ನಾವು ವಿದ್ಯುತ್‌ನಲ್ಲಿ ಸಾಮೂಹಿಕ ಕ್ಷಿಪ್ರ ಸಾರಿಗೆಯಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ರಸ್ತೆ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಲು ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಗಡ್ಕರಿ ಒತ್ತಿ ಹೇಳಿದರು.

Comments are closed.