Doddaballapura: SSLC ಪರೀಕ್ಷಾ ಕೇಂದ್ರದ ಸಿಸಿಟಿವಿ ಕ್ಯಾಮೆರಾ ನಾಶ!

Share the Article

Doddaballapura: ತಾಲ್ಲೂಕಿನ ತೂಬಗೆರೆ ಸರಕಾರಿ ಪದವಿಪೂರ್ವ ಕಾಲೇಜಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಕೊಠಡಿಗಳು ಹಾಗೂ ಹೊರಭಾಗದಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಕ್ಯಾಮೆರಾಗಳನ್ನು ಗುರುವಾರ ರಾತ್ರಿ ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಕೆಲವನ್ನು ಕಿತ್ತು ಹಾಕಿ ಮತ್ತೆ ಬೇರೆಡೆ ಜೋಡಿಸಿದ್ದಾರೆ.

14 ಕ್ಯಾಮೆರಾಗಳನ್ನು 10 ಕೊಠಡಿಗಳಲ್ಲಿ ಅಳವಡಿಕೆ ಮಾಡಲಾಗಿತ್ತು. ಇದರಲ್ಲಿ 6 ಕ್ಯಾಮೆರಾಗಳನ್ನು ಕಿತ್ತು ಹಾಕಲಾಗಿದೆ. ಅಷ್ಟು ಮಾತ್ರವಲ್ಲದೇ ಕೊಠಡಿಗಳ ಬಾಗಿಲುಗಳ ಬೀಗ ಮುರಿದು ಒಳಗೆ ಹೋಗಿದ್ದಾರೆ.

ಕ್ಯಾಮೆರಾಗಳನ್ನು ಮತ್ತೆ ಜೋಡಿಸಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುವು ಮಾಡಲಾಗಿದೆ.

Comments are closed.