Belthangady: ಬೆಳ್ತಂಗಡಿ : ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ವಂಚನೆ: ಗ್ರಾಮದ ವಿ.ಎ ಸುದೇಶ್ ಕುಮಾರ್ ಮತ್ತು ಪತ್ನಿ ವಿರುದ್ಧ FIR

Belthangady: ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.95 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಮೂಡುಕೋಡಿ ಗ್ರಾಮದ ವಿ.ಎ ಸುದೇಶ್ ಕುಮಾರ್ ಹಾಗೂ ಅವರ ಪತ್ನಿ ಮೀನಾಕ್ಷಿ ಅವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಮಾ.19 ರಂದು ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿ (Belthangady) ತಾಲೂಕಿನ ಮೂಡುಕೊಡಿ ಗ್ರಾಮದ ನಿವಾಸಿ ರೋಯಿ ವರ್ಗೀಸ್ ಎಂಬವರೇ ದೂರು ನೀಡಿದವರಾಗಿದ್ದಾರೆ. ರೋಯಿ ವರ್ಗೀಸ್ ಅವರು ಮೂಡುಕೋಡಿ ಗ್ರಾಮದಲ್ಲಿ ಪಟ್ಟಾ ಜಮೀನು ಹೊಂದಿದ್ದು ಅದಕ್ಕೆ ತಾಗಿಕೊಂಡಿರುವ ಕುಮ್ಮಿ ಜಮೀನಿಗೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದರು. ದಿನಾಂಕ:
22.03.2023 ರಂದು ಸರ್ವೆ ನಂಬ್ರ: 173/3 ಮತ್ತು 120/3 D1 ರ ಸರ್ವೆ ನಡೆಸಿ ಲಂಚ ನೀಡಲು ಬೇಡಿಕೆ ಇಟ್ಟ ಮೇರೆಗೆ ಪಿರ್ಯಾದಾರರಿಂದ ವಿವಿಧ ದಿನಾಂಕದಂದು ಹಂತ ಹಂತವಾಗಿ ಒಟ್ಟು 4.95.000/-ರೂ ಪಡೆದು ಜಮೀನು ಅಕ್ರಮ ಸಕ್ರಮದಲ್ಲಿ ಮಂಜೂರುಗೊಳಿಸುವುದಾಗಿ ತಿಳಿಸಿ ಜಮೀನು ಮಂಜೂರು ಮಾಡಿಸಿಕೊಡದೇ ಹಾ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಮಾ.19 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ರೋಯಿ ವರ್ಗೀಸ್ ದೂರು ನೀಡಿದ್ದು ಅದರಂತೆ 1860 (u/s 417, 420) ಯಂತೆ ಪ್ರಕರಣ ದಾಖಲಿಸಲಾಗಿದೆ.
Comments are closed.