Entertainment News: ನಿರೀಕ್ಷೆ ಮೂಡಿಸಿದ ‘ಗಂಟ್ ಕಲ್ವೆರ್’ ತುಳು ಸಿನಿಮಾ, ಮೇ 23 ರಂದು ರಾಜ್ಯಾದ್ಯoತ ಬಿಡುಗಡೆ

Entertainment News: ಸುಧಾಕರ ಬನ್ನಂಜೆ ತುಳುನಾಡಿನ ಚಿರಪರಿಚಿತ ಹೆಸರು. ತುಳು ಹಾಗೂ ಕನ್ನಡ, ನಾಟಕ ಯಕ್ಷಗಾನ , ಪತ್ರಿಕೋದ್ಯಮ, ಧಾರಾವಾಹಿ, ಸಿನಿಮಾರಂಗ ಹೀಗೆ ಎಲ್ಲಾ ರಂಗದಲ್ಲೂ ತನ್ನತನ ಮೆರೆದ ತುಳುನಾಡಿನ ಅಪೂರ್ವ ಪ್ರತಿಭೆ. ಇದೀಗ ಇವರು ಕಥೆ ಚಿತ್ರಕಥೆ ಸಂಭಾಷಣೆ ಹಾಡು ಬರೆದು, ಗೆಳೆಯರ ಜತೆಗೂಡಿ ನಿರ್ಮಿಸಿ ನಿರ್ದೇಶಿಸಿದ ತುಳು ಹಾಸ್ಯ ಪ್ರಧಾನ ಸಾಂಸಾರಿಕ ಕಥಾ ವಸ್ತುವಿನ ತುಳುನಾಡ ಮಣ್ಣಿನ ಸೊಗಡಿನ ಇನ್ನೂರಕ್ಕೂ ಮಿಕ್ಕಿದ ಕಲಾವಿದರು ನಟಿಸಿರುವ “ಗಂಟ್ ಕಲ್ವೆರ್” ಚಿತ್ರ ಬರುವ ಮೇ 23 ರಂದು ರಾಜ್ಯಾದ್ಯಾಂತ ಬಿಡುಗಡೆ ಆಗಲಿದೆ.
ಪ್ರಶಸ್ತಿ ವಿಜೇತ ವಿ. ಮನೋಹರ್ ಸಂಗೀತ ನೀಡಿದ್ದು ಹಾಡುಗಳು ಈಗಾಗಲೇ ಜನರ ಬಾಯಲ್ಲಿ ನಲಿದಾಡುತ್ತಿದೆ
‘ನಿನ್ನ ಕಡೆ ನೋಟೋಗು ಮತ್ತು ಈ ಪೋರ್ಲುದ ಈ ಮೋನೆಡ್’ ಎಂಬ ಎರಡು ಹಾಡುಗಳು ಈಗಾಗಲೇ ವೈರಲ್ ಆಗಿವೆ. ನವೀನ್ ಪಡೀಲ್, ಅರವಿಂದ ಬೋಳಾರ, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಉಮೇಶ ಮಿಜಾರು, ಸಂದೀಪ ಶೆಟ್ಟಿ ಮಾಣಿಬೆಟ್ಟು, ರವಿ ಸುರತ್ಕಲ್, ಪ್ರಶಾಂತ ಎಳ್ಳಂಪಳ್ಳಿ, ಯಾದವ ಮಣ್ಣಗುಡ್ಡೆ, ವಸಂತ ಮುನಿಯಾಲ್, ಅರುಣ ಕುಮಾರ ಹೀಗೆ ಹಾಸ್ಯ ನಟರ ದಂಡಿದೆ.
ಗಿರೀಶ್ ಶೆಟ್ಟಿ ಕಟೀಲು, ಸುಧೀರ್ ಕೊಠಾರಿ, ನಾಗೇಶ ಡಿ ಶೆಟ್ಟಿ ಕ್ಲಾಡಿ ಡಿಲೀಮಾ, ಸಂಪತ್ ಕೈ ಕಂಬ, ರಾಜಾರಾಮ ಶೆಟ್ಟಿ ಉಪ್ಪಳ, ಶೇಖರ ಪಾಂಗಾಳ, ರಾಕೇಶ್ ಆಚಾರ್ಯ ರಣವೀರ್, ರಮಾನಂದ ಕರ್ಪೆ, ಅರುಣ್ ಶೆಟ್ಟಿ, ಸತೀಶ್ ಕಲ್ಯಾಣಪುರ ಸುರೇಶ ಪಾಂಗಾಳ, ನಮಿತಾ, ಸುಮಾಲಿನಿ, ಸಂಚಿತಾ, ದಿಶಾ, ಮೈತ್ರಿ, ಉಷಾ, ಮೋನಿಕಾ, ಮುಂತಾದ ಪ್ರಬುದ್ದ ಕಲಾವಿದರ ಸೇನೆ ಇದೆ.
ವಿಶೇಷ ಪಾತ್ರದಲ್ಲಿ ನಾಯಕ ನಟರಾದ ಅಥರ್ವ ಪ್ರಕಾಶ್, ಶ್ರೀಕಾಂತ ರೈ, ಪ್ರಣವ್ ಹೆಗ್ಡೆ ,ಶೈಲೇಶ್ ಕೋಟ್ಯಾನ್ ಕಾಣಿಸಿ ಕೊಂಡಿದ್ದಾರೆ. ಆರ್ಯನ್ ಹರ್ಷ ಶೆಟ್ಟಿ ಹಾಗೂ ಸ್ಮಿತಾ ಸುಧೀರ್ ಸುವರ್ಣ ಈ ಚಿತ್ರದ ನಾಯಕ ನಾಯಕಿಯರು.
ತಮ್ಮ ಲಕ್ಷ್ಮಣ ಕಲಾ ನಿರ್ದೇಶನ ಕೆ ಗಿರೀಶ್ ಕುಮಾರ್ ಸಂಕಲನ ಶಂಕರ ರವಿ ಕಿಶೋರ ಛಾಯಾಗ್ರಹಣ, ಪ್ರಶಾಂತ ಎಳ್ಳಂಪಳ್ಳಿ ರಾಮದಾಸ ಸಸಿಹಿತ್ಲು ಸಹ ನಿರ್ದೇಶನ ಇದೆ
ರಾಜಾರಾಮ ಶೆಟ್ಟಿ ಉಪ್ಪಳ, ಮಮತಾ ಎಸ್ ಬನ್ನಂಜೆ, ಗಿರೀಶ್ ಪೂಜಾರಿ ಮೊದಲಾದವರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
Comments are closed.