Promotion : ಶೀಘ್ರವೇ 58 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ `ಬಡ್ತಿ’!!

 

Promotion: ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದು ಸದ್ಯದಲ್ಲೇ 58,000 ಶಿಕ್ಷಕರಿಗೆ ಬಡ್ತಿ ಭಾಗ್ಯ ನೀಡಲು ಮುಂದಾಗಿದೆ.

 

ಹೌದು,  ನಿರೀಕ್ಷೆಯಲ್ಲಿರುವ ರಾಜ್ಯದ ಪ್ರಾಥಾಮಿಕ ಶಾಲಾ ಶಿಕ್ಷರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಹಿಸುದ್ದಿ ನೀಡಿದ್ದು, 58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಬಡ್ತಿಯನ್ನು ಎದುರು ನೋಡುತ್ತಿದ್ದ ಪ್ರೌಢಶಾಲಾ ಶಿಕ್ಷಕರಿಗೆ ಸಂತಸ ತಂದಿದೆ.

 

ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಪದವಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಸುಮಾರು 58 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6ರಿಂದ 8ನೇ ತರಗತಿ ಬೋಧನೆಯ ಪದವೀಧರ ಶಿಕ್ಷಕ ವೃಂದಕ್ಕೆ ಬಡ್ತಿ ನೀಡುವ ಸಂಬಂಧ 2017ರ ಪ್ರಾಥ ಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (ಸಿಅಂಡ್‌ ಆ‌ರ್) ಶೀಘ್ರ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದ್ದಾರೆ.

 

ಅಲ್ಲದೆ ಎನ್‌ಸಿಟಿ ಇಯು ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 5ನೇ ತರಗತಿ ಶಿಕ್ಷಕರಿಗೆ ಪಿಯುಸಿ, ಟಿಸಿಎಸ್/ಡಿಇಡಿ ಮತ್ತು 6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರಿಗೆ ಪದವಿ ಮತ್ತು ಟಿಸಿಎಸ್‌ /ಡಿ ಇಡಿ ವಿದ್ಯಾರ್ಹತೆ ನಿಗದಿಪಡಿಸಿರುತ್ತದೆ. ಅದರಂತೆ 2027 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಿಅಂಡ್‌ಆರ್‌ಗೆ ತಿದ್ದುಪಡಿ ತಂದು ಹೊಸ ನಿಯಮ ರಚಿಸಲಾಗಿದೆ ಎಂದು ಹೇಳಿದ್ದಾರೆ.

Comments are closed.