CM Siddaramaiah: ಸಿಎಂ ಸಿದ್ದು ಹೆಲಿಕಾಪ್ಟರ್ ಪ್ರಯಾಣ: ಸರ್ಕಾರಿ ಬೊಕ್ಕಸದಿಂದ ಬರೋಬ್ಬರಿ ₹30 ಕೋಟಿ ಖರ್ಚು

Helicopters Travel: 2023ರಿಂದ ಜನವರಿ 15, 2025ರ ನಡುವಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರ ಹೆಲಿಕಾಪ್ಟರ್(Helicopter) ಪ್ರಯಾಣದಿಂದಾಗಿ ಸರ್ಕಾರಿ ಬೊಕ್ಕಸದಿಂದ ₹30 ಕೋಟಿಗೂ ಹೆಚ್ಚು ವೆಚ್ಚವಾಗಿದೆ ಎಂದು ರಾಜ್ಯ ಸರ್ಕಾರ ಸದನಕ್ಕೆ ತಿಳಿಸಿದೆ. ಸರ್ಕಾರವು ಸದನದಲ್ಲಿ ಮಂಡಿಸಿದ ದಾಖಲೆಗಳ ಪ್ರಕಾರ, ಮೈಸೂರಿಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ₹10.85 ಲಕ್ಷ ಖರ್ಚು ಮಾಡಲಾಗಿದೆ. ಸಿದ್ದರಾಮಯ್ಯ ಅವರು ದೆಹಲಿ ಮತ್ತು ಚೆನ್ನೈನಂತಹ ನಗರಗಳಿಗೆ ಚಾರ್ಟರ್ ವಿಮಾನಗಳನ್ನು ಸಹ ಬುಕ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ 2023-24ರಲ್ಲಿ 12.65 ಕೋಟಿ ರೂ. ಮತ್ತು 2024-25ರಲ್ಲಿ, ಜನವರಿ 15 ರವರೆಗೆ. 19.35 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇನ್ನೂ ಇದಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ, ಬೆಂಗಳೂರಿನಿಂದ ಕೇವಲ 1.5 ಗಂಟೆ ಪ್ರಯಾಣ ಇರೋ ಮೈಸೂರು ಸೇರಿದಂತೆ ಅಲ್ಲಿನ ಹತ್ತಿರದ ಸ್ಥಳಗಳಿಗೂ ಸಿಎಂ ಹೆಲಿಕಾಪ್ಟರ್ನಲ್ಲೇ ಪ್ರಯಾಣ ಬೆಳೆಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಎಂಎಲ್‌ಸಿ ಟಿ.ಎನ್. ಜವರಾಯಿಗೌಡ ಅವರು ಸಿಎಂ ಬುಕ್ ಮಾಡಿದ ಜೆಟ್‌ಗಳು ಮತ್ತು ವಿಮಾನಗಳ ಕುರಿತು ಕೇಳಿದ ಪ್ರಶ್ನೆಗೆ ಈ ವಿವರಗಳನ್ನು ನೀಡಲಾಗಿದೆ. ಯಾರು ಎಲ್ಲಿ ಓಡಾಡಿದರೇನು? ಅವರ ದುಡ್ಡೇ? ಯಾರದ್ದೂ ದುಡ್ಡು ಎಲ್ಲಮ್ಮನ ಜಾತ್ರೆ ಮಾಡಿದ್ದಾರೆ ಸಿಎಂ ಅಷ್ಟೆ.
Comments are closed.