Robbery: ಭಟ್ಕಳ ಸೊಸೈಟಿ ಕಳ್ಳತನ ಪ್ರಕರಣ: ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಅರೆಸ್ಟ್!

Robbery: ಭಟ್ಕಳದ ರಂಗೀನಕಟ್ಟಾ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯಲ್ಲಿ ನಡೆದ ಕಳ್ಳತನ (robbery) ಪ್ರಕರಣಕ್ಕೆ ಸಂಭಂಧಿಸಿದಂತೆ ಭಟ್ಕಳ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

 

ಬಂಧಿತ ಆರೋಪಿಯನ್ನು ಭಟ್ಕಳದ ಕಿದ್ವಾಯಿ ಮೇನ್ ರೋಡ್ 2 ನೇ ಕ್ರಾಸ್ ಹತ್ತಿರದ‌ ನಿವಾಸಿಯಾದ ಮೊಹಮ್ಮದ ಗೌಸ್ ನ ಪುತ್ರನಾದ ಮೊಹಮ್ಮದ ರಾಯಿಕ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ 40,000 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

 

ಭಟ್ಕಳದ ರಂಗೀನಕಟ್ಟಾ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯಲ್ಲಿ ಯಾರೋ ಕಳ್ಳರು ದಿನಾಂಕ 16/04/2024 ರಂದು ಸಾಯಂಕಾಲ 5-30 ಗಂಟೆಯಿಂದ ದಿನಾಂಕ 17/04/2024 ಬೆಳಿಗ್ಗೆ 9-30 ಗಂಟೆಯ ನಡುವಿನ ಅವಧಿಯಲ್ಲಿ ಒಟ್ಟು ನಗದು ಹಣ 1,70,968/- ರೂಪಾಯಿಗಳನ್ನು ಲಾಕರ್ ಸಮೇತ ಎತ್ತಿಕೊಂಡು ಹೋಗಿ ಕಳುವು ಮಾಡಿದ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ಭಟ್ಕಳ ವೃತ್ತ ನಿರೀಕ್ಷಕರಾ ಶ್ರೀ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಯ ಮೇಲೆ ಈಗಾಗಲೇ ಜಿಲ್ಲೆ ಮತ್ತು ಹೊರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.

 

Comments are closed.