Assault: ಮಹಿಳೆಯರ ಮುಂದೆ ಬಟ್ಟೆ ಬಿಚ್ಚಿದ ಆಫ್ರಿಕಾ ವ್ಯಕ್ತಿ: ಸ್ಥಳೀಯರಿಂದ ಬಿತ್ತು ಗೂಸಾ

Assault: ಆಫ್ರಿಕಾ ಮೂಲದ 34 ವರ್ಷದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಹರಿಯಾಣದ ಗುರುಗ್ರಾಮದ ಸೊಸೈಟಿ ಒಂದರಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಎಲ್ಲ ಬಟ್ಟೆಗಳನ್ನು ಕಳಚಿ(naked) ಮಹಿಳೆಯರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಎಲ್ಲರ ಸಮ್ಮುಖದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ವರದಿ ಹೇಳಿದೆ. ಇದನ್ನು ಗಮನಿಸಿದ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದು, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಪೊಲೀಸರ ಪ್ರಕಾರ, ಕಳೆದ ಕೆಲ ದಿನಗಳ ಹಿಂದೆ ಪಿರಮಿಡ್ ಹೈಟ್ಸ್ ಸೊಸೈಟಿಯ ಟವರ್ 4 ರ ನಿವಾಸಿಗಳ ನಡುವೆ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವೇಳೆ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು, ಅಲ್ಲಿ ವಿದೇಶಿ ಪ್ರಜೆ ಜಗಳವಾಡುತ್ತಿರುವುದನ್ನು ನೋಡಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ರಾತ್ರಿ 11.45 ರ ಸುಮಾರಿಗೆ ಆರೋಪಿಯು ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಟವರ್ 4 ರ ಫ್ಲಾಟ್ ಸಂಖ್ಯೆ 1101 ಕ್ಕೆ ಬಲವಂತವಾಗಿ ಪ್ರವೇಶಿಸಿದ್ದಾನೆ ಎಂದು ನಿವಾಸಿಯೊಬ್ಬರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಹದ ಮೇಲೆ ಗಾಯದ ಗುರುತುಗಳನ್ನು ಹೊಂದಿದ್ದ ಮತ್ತು ಕುಡಿದ ಅಮಲಿನಲ್ಲಿದ್ದಂತೆ ಕಾಣುತ್ತಿದ್ದ ಆ ವ್ಯಕ್ತಿ, ನಿವಾಸಿಗಳು ಅವನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ತಿಳಿಸುವ ಮೊದಲೇ ಅವರು ನಿಂದನೆ ಮತ್ತು ಬೆದರಿಕೆಗಳನ್ನು ಸಹ ಒಡ್ಡಿದ್ದಾರೆ ಎಂದು ದೂರನ್ನು ಉಲ್ಲೇಖಿಸಿರುವ ಬಗ್ಗೆ ಅವರು ಹೇಳಿದರು.

Comments are closed.