Accident: ಅಂಕೋಲಾ: ರಸ್ತೆಗೆ ಅಡ್ಡ ಬಂದ ದನವನ್ನು ರಕ್ಷಿಸುವ ಪ್ರಯತ್ನ ದಲ್ಲಿ ಕಾರ್ ಪಲ್ಟಿ: ಓರ್ವ ಸ್ಥಳದಲ್ಲೇ ಮೃತ್ಯು!

Accident: ಹೆದ್ದಾರಿ ರಸ್ತೆಗೆ ಅಡ್ಡ ಬಂದ ದನ ವನ್ನು ತಪ್ಪಿಸಲು ಹೋಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ (Accident) ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಾರ್ಚ್ 19 ರಂದು ರಾ.ಹೆ 63ರ ಕಂಚಿನಬಾಗಿಲು ಬಳಿಯ ತಿರುವಿನಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಹುಬ್ಬಳ್ಳಿ ಮೂಲದವರಾದ ಕೆನರಾ ಬ್ಯಾಂಕ್ ನಿವೃತ್ತ್ ನೌಕರ ಸುರೇಶ ಶಂಕರ ರಾಣೆ (80) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕೀಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.