of your HTML document.

Uppinangady: ಹೋಳಿ ಸಂದರ್ಭ ಕಾರ್ಮಿಕರ ಮೇಲೆ ಹಲ್ಲೆ; ಬಿಹಾರ ಕುಟುಂಬ ನಾಪತ್ತೆ

Uppinangady: ಹೋಳಿ ಸಂಭ್ರಮಾಚರಣೆಯಲ್ಲಿದ್ದ ಬಿಹಾರ ಮೂಲದ ಕಾರ್ಮಿಕರ ಮೇಲೆ 34ನೇ ನೆಕ್ಕಿಲಾಡಿಯಲ್ಲಿ ಗುಂಪೊಂದು ದಾಳಿ ನಡೆಸಿದ ಪರಿಣಾಮ ಹಲ್ಲೆಗೊಳಗದ ಕಾರ್ಮಿಕರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ವಸತಿಯೊಂದರಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಬಿಹಾರ ಮೂಲದ ಕಾರ್ಮಿಕರು ಹೋಳಿ ಹಬ್ಬ ಆಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಕೆಲವರು ಅನ್ಯಮತೀಯ ಬಾಲಕರಿಬ್ಬರಿಗೆ ಬಣ್ಣ ಹಚ್ಚಿದರೆಂದು ಆರೋಪ ಮಾಡಿ, ಗುಂಪೊಂದು ಕಾರ್ಮಿಕರು ಇದ್ದ ವಸತಿಗೆ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಕಾರ್ಮಿಕರು ಇದರಿಂದ ಹೆದರಿ ಓಡಿ ಹೋಗಿದವರು ವಾಪಾಸು ಬಂದಿಲ್ಲ ಎನ್ನಲಾಗಿದೆ. ಕಾರ್ಮಿಕರು ತಮ್ಮ ವಸತಿಯಲ್ಲಿ ಹಬ್ಬದೂಟಕ್ಕೆಂದು ಸಿದ್ಧಪಡಿಸಿದ ಭಕ್ಷ್ಯಗಳೆಲ್ಲ ಅಲ್ಲೇ ಬಿದ್ದಿದ್ದವು ಎಂದು ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪ್ಪಿನಂಗಡಿ ಪೊಲೀಸರು, ಹೋಳಿ ಆಚರಣೆ ಮಾಡುತ್ತಿದ್ದ ಹೊರ ರಾಜ್ಯದ ಕಾರ್ಮಿಕರು ಮದ್ಯ ಸೇವಿಸಿ ಪರಸ್ಪರ ಜಗಳವಾಡುತ್ತಿದ್ದರು ಎನ್ನುವ ಕಾರಣಕ್ಕೆ ಇವರ ಮೇಲೆ ನಿಗಾ ಇಡಲಾಗಿತ್ತು. ನೆಕ್ಕಿಲಾಡಿಯಲ್ಲಿ ಸ್ಥಳೀಯ ಬಾಲಕರಿಬ್ಬರಿಗೆ ಕೂಡಾ ಬಣ್ಣ ಹಚ್ಚಿದ ಕಾರಣ ಪ್ರಶ್ನಿಸಲೆಂದು ಹೋದ ವ್ಯಕ್ತಿಗಳ ಮೇಲೆ ಕಾರ್ಮಿಕರ ಪೈಕಿ ಒಂದಿಬ್ಬರು ಹಲ್ಲೆ ಮಾಡಲು ಮುಂದಾಗಿದ್ದರು, ಇದರಿಂದ ಸಿಟ್ಟುಗೊಂಡ ಸ್ಥಳೀಯರು ಗುಂಪುಗೂಡಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದರು ಎನ್ನುವ ಮಾಹಿತಿ ದೊರಕಿತ್ತು.

ಕೂಡಲೇ ಅಲ್ಲಿಗೆ ಪೊಲೀಸರು ಬಂದಿದ್ದು ಗುಂಪನ್ನು ಚದುರಿಸಿದರು. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

Comments are closed.