Sullia: ಸುಳ್ಯ: ಅರಂಬೂರು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಸಂಪನ್ನ

Sullia: ಸುಮಾರು 300 ವರ್ಷಗಳ ಇತಿಹಾಸವಿರುವ ಸುಳ್ಯದ (Sullia) ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ವೈಭವೋಪೇತ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.19 ರ ಪ್ರಾತ:ಕಾಲದಲ್ಲಿ ಸಂಪನ್ನಗೊಂಡಿತು.

ಕಲಿಯುಗದಲ್ಲಿ ಪ್ರತ್ಯಕ್ಷ ದೈವವಾಗಿ ಭೂಮಿಯಲ್ಲಿ ಅವತರಿಸಿದ ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವದ ಅನುಗ್ರಹ ಪಡೆದು ಸಾವಿರಾರು ಭಕ್ತರು ಪುನೀತರಾದರು. ಶ್ರೀ ವಯನಾಟ್ ಕುಲವನ್ ದೈವ ಹಾಗೂ ಶ್ರೀ ವಿಷ್ಣುಮೂರ್ತಿ ದೈವಗಳ ಕೋಲವು ಮಾ.18 ರಂದು ಮುಸ್ಸಂಜೆ ಸಮಯದಲ್ಲಿ ಜೊತೆಯಾಗಿ ನಡೆಯುವುದರೊಂದಿಗೆ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ವೈಭವೋಪೇತ ಮಹೋತ್ಸವವು ದೈವಸ್ಥಾನದಲ್ಲಿ ಮಾ.19 ರ ಪ್ರಾತ:ಕಾಲದಲ್ಲಿ ಕೈವೀದ್ ನಡೆದು ಸಂಪನ್ನಗೊಂಡಿತು.
Comments are closed.