Sameer MD: ಸೌಜನ್ಯ ಪ್ರಕರಣದ ಸಾಕ್ಷಿ ನಾಶ ಆಗಿದ್ದು ಹೇಗೆ? ಎರಡನೇ ವಿಡಿಯೋ ಹರಿಬಿಟ್ಟ ಸಮೀರ್ !!

Share the Article

Sameer MD : ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಇದರ ನಡುವೆ ಕೆಲವು ವಾರಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೋ ಬೃಹತ್ ಮಟ್ಟದಲ್ಲಿ ವೈರಲ್ ಆಗಿತ್ತು. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತು. ಮರೆತು ಹೋಗಿದ್ದಂತಹ ಪ್ರಕರಣ ಮತ್ತೆ ಮುನ್ನಲೆಗೆ ಬಂದಿತ್ತು. ಮತ್ತೆ ರಾಜ್ಯಾದ್ಯಂತ ಕೆಲವು ಸಂಘಟನೆಗಳು ಎಚ್ಚೆತ್ತುಕೊಂಡು ಈ ಕುರಿತಾಗಿ ಹೋರಾಟವನ್ನು ಮುನ್ನಡೆಸಿದ್ದವು. ಅಲ್ಲದೆ ಕೆಲವರು ಈ ವಿಡಿಯೋವನ್ನು ವಿರೋಧಿಸಿ ಸಮೀರ್ ಎಂಡಿ ವಿರುದ್ಧ ಕಾನೂನು ಸಮರವನ್ನು ಕೂಡ ಸಾರಿದ್ದರು. ಬಳಿಕ ಸಮೀರ್ ಅವರ ಮೇಲೆ FIR ಹಾಕುವುದನ್ನು ಹೈ ಕೋರ್ಟ್ ತಡೆದಿತ್ತು. ಇದೀಗ ಈ ಈ ಬೆನ್ನಲ್ಲೇ ಸೌಜನ್ಯ ಪ್ರಕರಣದ ಕುರಿತಾಗಿ ಎರಡನೇ ವಿಡಿಯೋವನ್ನು ಸಮೀರ್ ಅವರು ಯೂಟ್ಯೂಬ್ ನಲ್ಲಿ ಹರಿ ಬಿಟ್ಟಿದ್ದಾರೆ. ಇದರಲ್ಲಿ ಸೌಜನ್ಯ ಪ್ರಕರಣದ ಸಾಕ್ಷಿ ನಾಶ ಆಗಿದ್ದು ಹೇಗೆ ಎಂಬ ಮಾಹಿತಿ ನೀಡಿದ್ದಾರೆ.

 

ಹೌದು, ಸಮೀರ್ ಎಂಡಿ ತನ್ನ ಧೂತ ಎನ್ನುವ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಈ ವಿಡಿಯೋ ಕೂಡ ಅಷ್ಟೇ ಸದ್ದು ಮಾಡುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿದ ಬಳಿಕ ಸಮೀರ್‌ ಎಂಡಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದೀಗ ಮತ್ತೆ ಎರಡನೇ ಬಾರಿ ಸಮೀರ್ ಅವರ ವಿಡಿಯೋ ರಾಜ್ಯಾದ್ಯಂತ ಕಿಚ್ಚು ಹಬ್ಬಿಸಿದೆ. ಹಾಗಿದ್ದರೆ ಆ ವಿಡಿಯೋದಲ್ಲಿ ಇರುವುದು ಏನು? ಇಲ್ಲಿದೆ ನೋಡಿ.

 

“ಸೌಜನ್ಯಗೆ ನ್ಯಾಯ ಕೇಳುವುದಕ್ಕೆ ನನ್ನ ಮೇಲೆ ಇಷ್ಟೊಂದೆಲ್ಲ ಆಗಿದೆ ಅಂದರೆ, ಜಸ್ಟ್ ಇಮ್ಯಾಜಿನ್ ಸೌಜನ್ಯ ಕೇಸ್‌ನಲ್ಲಿ ಯಾರೆಲ್ಲ ಸಾಕ್ಷಿ ಆಗಬಹುದಿತ್ತೋ ಅವರ ಜೊತೆ ಇನ್ನೂ ಏನೆಲ್ಲ ಆಗಿರಲ್ಲ. ಈ ವಿಡಿಯೋ ಯಾವುದೇ ಜಾತಿ, ಧರ್ಮ, ದೇವಸ್ಥಾನಕ್ಕೆ ಸಂಬಂಧ ಪಟ್ಟಿದ್ದಲ್ಲ. ಈ ವಿಡಿಯೋದಲ್ಲಿ ಕೇವಲ ಸೌಜನ್ಯ ಕೇಸ್ ಬಗ್ಗೆ ಮಾತ್ರ ಮಾತಾಡುತ್ತಿದ್ದೇನೆ. ಸೌಜನ್ಯ ಕೇಸ್‌ನಲ್ಲಿ ಯಾರೆಲ್ಲ ಸಾಕ್ಷಿ ಆಗಬಹುದಿತ್ತೋ ಅದೆಲ್ಲ ಹೇಗೆ ನಾಶ ಆಯ್ತು? ಅನ್ನೋ ಬಗ್ಗೆ ಮಾತಾಡುತ್ತಿದ್ದೇನೆ.” ಎಂದು ಸಮೀರ್ ಎಂಡಿ ವಿಡಿಯೋವನ್ನು ಆರಂಭಿಸಿದ್ದಾರೆ.

 

ಈ ವಿಡಿಯೋ ಕೂಡ 9 ಅಕ್ಟೋಬರ್ 2012 ಸೌಜನ್ಯ ಕಾಣೆಯಾದ ದಿನದಿಂದಲೇ ಶುರುವಾಗುತ್ತೆ. ಊರಿನ ಸುಮಾರು 200 ರಿಂದ 300 ಮಂದಿ ಸೇರಿಕೊಂಡು ಸೌಜನ್ಯಳನ್ನು ಹುಡುಕುತ್ತಾರೆ. ಅಲ್ಲಿಂದ ಒಂದೊಂದು ಸಾಕ್ಷಿ ಹೇಗೆ ನಾಶ ಆಯ್ತು? ಅಂದು ಈ ಕೇಸ್‌ ಅನ್ನು ತನಿಖೆ ಮಾಡುತ್ತಿದ್ದ ಪೊಲೀಸರು ಸಾಕ್ಷಿಗಳನ್ನು ಹೇಗೆ ನಾಶ ಮಾಡಿದರು? ಸಾಕ್ಷಿಗಳನ್ನು ಹೇಗೆ ಸೃಷ್ಟಿಸಿದ್ದರು? ಈ ಕೇಸ್ ಅಂದು ದಾರಿ ತಪ್ಪಿದ್ದು ಹೇಗೆ? ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದವರು ಒಬ್ಬೊಬ್ಬರೇ ಹೇಗೆ ಸತ್ತರು? ಅನ್ನೋದನ್ನು ಸಮೀರ್ ಎಂಡಿ ಎರಡನೇ ವಿಡಿಯೋದಲ್ಲಿ ವಿವರಿಸಿದ್ದಾರೆ.

https://youtu.be/68IkvBlHcwY?si=ojBaiKCvfelG0m4f

Comments are closed.