Missing case: ಅಮೆರಿಕಾದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಸ್ನೇಹಿತ ಓರ್ವ ಅರೆಸ್ಟ್

Share the Article

Missing case: ಅಮೆರಿಕಾದಲ್ಲಿ ಭಾರತ ಮೂಲದ ಸುದೀಕ್ಷಾ ಕೊನಂಕಿ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಕೆ, ಮಾರ್ಚ್ 6ರಿಂದ ನಾಪತ್ತೆಯಾಗಿದ್ದಾಳೆ (Missing case) . ಅಂದು ಸಂಜೆ ಆಕೆ ತನ್ನ ಸ್ನೇಹಿತರ ಜೊತೆಗೆ ಕಡಲತೀರದ ಡೊಮಿನಿಕನ್ ರಿಪಬ್ಲಿಕ್ ಗೆ ಆಗಮಿಸಿದ್ದಳು. ಅಂದು ರಾತ್ರಿಯಿಂದ ಆಕೆಯ ಸುಳಿವಿಲ್ಲ. ಸುದೀಕ್ಷಾ ನಾಪತ್ತೆಯಾಗಿ 11 ದಿನಗಳು ಕಳೆದಿವೆ. ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

 

ಆದರೆ ಪೊಲೀಸರ ಪ್ರಕಾರ ಸುದೀಕ್ಷಾ ಮಾರ್ಚ್ 6ರಂದು ಸಂಜೆ ತನ್ನ ಗೆಳೆಯರ ಜೊತೆ ಕ್ಲಬ್ ವೊಂದರಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋ ಲಭ್ಯವಾಗಿದೆ. ಕ್ಲಬ್ ಆವರಣದಲ್ಲಿ ಆಕೆ ಓಡಾಟ ನಡೆಸುತ್ತಿರುವುದೂ ಪತ್ತೆಯಾಗಿದೆ. ಸುದೀಕ್ಷಾ ಜೊತೆ ಹೋಗಿದ್ದ ಆಕೆಯ ನಾಲ್ವರು ಗೆಳೆಯರ ಪೈಕಿ ಜೋಷುವಾ ರೀಬೆ ಎಂಬಾತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಸುದಿಕ್ಷಾ ಸಮುದ್ರದಲ್ಲಿ ಮುಳುಗಿರುವ ಶಂಕೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.