Meerat: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪೀಸ್ ಪೀಸ್ ಮಾಡಿ ಕತ್ತರಿಸಿ ಡ್ರಮ್‌ಗೆ ತುಂಬಿದ ಪತ್ನಿ!

Meerat: ದೇಶದಲ್ಲಿ ಮತ್ತೊಂದು ಪೀಸ್ ಪೀಸ್ ಘಟನೆ ನಡೆದಿದೆ. ಮೀರತ್‌ನಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನು ಕೊಂದು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಶವ ವಿಲೇವಾರಿ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಹೆಂಡತಿ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಲು ಇದಕ್ಕಾಗಿ ತನ್ನ ಗಂಡನನ್ನು ತುಂಬಾ ಕ್ರೂರ ರೀತಿಯಲ್ಲಿ ಕೊಲೆ ಮಾಡಿದ್ದು ಮಾತ್ರವಲ್ಲದೇ, ಆತನನ್ನು ಪೀಸ್ ಪೀಸ್ ಮಾಡಿದ್ದಾಳೆ. ನಂತರ ಮುಸ್ಕಾನ್ ತನ್ನ ಮಗಳನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು ಶಿಮ್ಲಾಕ್ಕೆ ಹೋಗಿದ್ದಾಳೆ. ಹಿಂದಿರುಗಿದ ಬಳಿಕ ಮುಸ್ಕಾನ್ ಮಂಗಳವಾರ ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವಾಗ ತನ್ನ ಗಂಡನ ಕೊಲೆಯ ಕುರಿತು ಹೇಳಿದ್ದಾಳೆ.
ಕೂಡಲೇ ಮನೆ ಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡ್ರಮ್ ಅನ್ನು ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಪೊಲೀಸರು ಆರೋಪಿಗಳಾದ ಮುಸ್ಕಾನ್ ಮತ್ತು ಸಾಹಿಲ್ ಶುಕ್ಲಾ ಅವರನ್ನು ಬಂಧನ ಮಾಡಿದ್ದಾರೆ.
ಲಂಡನ್‌ನಿಂದ ಹಿಂದಿರುಗಿನ ತನ್ನ ಗಂಡನ ಆಹಾರದಲ್ಲಿ ಮೊದಲಿಗೆ ಮಾದಕವಸ್ತುವನ್ನು ಬೆರೆಸಿದ್ದಾಳೆ. ನಂತರ ಅವನನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾಳೆ. ನಂತರ ಅದನ್ನು ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುಂಬಿಸಿ ಮೇಲೆ ಸಿಮೆಂಟ್ ದ್ರಾವಣವನ್ನು ಸುರಿದಿದ್ದಾಳೆ. ಅಷ್ಟೇ ಅಲ್ಲ ನಂತರ ಈಕೆ ತನ್ನ ಪ್ರೇಮಿಯೊಂದಿಗೆ ಮೋಜು ಮಾಡಲು ಶಿಮ್ಲಾಕ್ಕೆ ಹೋಗಿದ್ದಾಳೆ.
ಸೌರಭ್ ಕೆಲಸದ ವಿಷಯಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದರು. ಮಾ.4 ರಂದು ಮುಸ್ಕಾನ್ (ಹೆಂಡತಿ) ತನ್ನ ಗಂಡ ಸೌರಭ್‌ಗೆ ತನ್ನ ಆಹಾರದಲ್ಲಿ ಮಾದಕ ದ್ರವ್ಯವನ್ನು ಹಾಕಿದ್ದಾಳೆ. ನಂತರ ತನ್ನ ಪ್ರೇಮಿ ಸಾಹಿಲ್‌ಗೆ ಕರೆ ಮಾಡಿದ್ದಾಳೆ. ಇಬ್ಬರೂ ಸೇರಿ ನಂತರ ಸೌರಭ್ ಎದೆಗೆ ಚಾಕುವಿನಿಂದ ಪದೇ ಪದೇ ಇರಿದಿದ್ದಾರೆ. ನಂತರ ಆತನ ದೇಹವನ್ನು 10-12 ತುಂಡುಗಳಾಗಿ ಕತ್ತರಿಸಿದ್ದಾರೆ.
Comments are closed.