Mangalore Sewage: ಕೇರಳದ ಕೊಳಚೆ ತ್ಯಾಜ್ಯ ಕರ್ನಾಟಕಕ್ಕೆ; ಮನಪಾಗೆ ಸಿಎಂ ಕಚೇರಿಯಿಂದ ಸೂಚನೆ

Mangalore Sewage: ಕೇರಳ ರಾಜ್ಯದ ಕೊಳಚೆ ತ್ಯಾಜ್ಯವನ್ನು ಮಂಗಳೂರಿಗೆ ತಂದು ಸುರಿಯುತ್ತಿದ್ದ ಕುರಿತು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಮಂಗಳೂರು ಪಾಲಿಕೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ ಪತ್ರ ಬರೆದಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಕ್ರಮ ಕೈಗೊಂಡ ಬಗ್ಗೆ ಮಂಗಳೂರು ಪಾಲಿಕೆ ಸರಕಾರಕ್ಕೆ ಉತ್ತರ ನೀಡಿದೆ. ತ್ಯಾಜ್ಯ ಸುರಿದ ವಾಹನಗಳಿಗೆ ದಂಡ ವಿಧಿಸಲಾಗಿದೆ. ಹಾಗೂ ಪೊಲೀಸ್ ದೂರು ನೀಡಲಾಗಿದೆ. ಹಾಗೂ ಇಂತಹ ಘಟನೆ ಮತ್ತೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸರಕಾರಕ್ಕೆ ಮಂಗಳೂರು ಪಾಲಿಕೆಯ ಆಯುಕ್ತರು ಪತ್ರ ಬರೆದಿದ್ದಾರೆ.
Comments are closed.