U T Khadar: ಸದನದಲ್ಲಿ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದ ಖಾದರ್!
ʻತೆಗೆದು ಬಿಸಾಡುತ್ತೇನೆ, ಗೆಟ್ ಔಟ್!ʼ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್

U T Khadar: ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎನ್ನುವ ಕುರಿತು ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ಕೆಂಡಾಮಂಡಲಗೊಂಡ ಸ್ಪೀಕರ್ ಯು.ಟಿ.ಖಾದರ್ ʼತೆಗೆದು ಬಿಸಾಡುತ್ತೇನೆ, ಗೆಟ್ ಔಟ್!ʼ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದ ಘಟನೆ ನಡೆದಿದೆ.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ನಿಧಿಯನ್ನು ಖಾತಿ ಯೋಜನೆಗಳಿಗಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ತೀವ್ರ ವಾಗ್ವಾದ ಮಾಡಿದರು. ಸಿಎಂ ಉತ್ತರ ನೀಡುತ್ತಿರುವಾಗಬಿಜೆಪಿ ಸದಸ್ಯರು ಈ ವಿಷಯವನ್ನು ಎತ್ತಿದರು.
ಆಗ ಸ್ಪೀಕರ್ ಖಾದರ್ ಅವರು, ʼಎಲ್ಲದಕ್ಕೂ ಒಂದು ಮಿತಿ ಇದೆʼ ಎಂದು ಹೇಳಿದರು. ” ನೀವು ಕೇಳಲು ಬಯಸದಿದ್ದರೆ, ಸದನದಿಂದ ಹೊರನಡೆಯಿರಿ, ಇಲ್ಲದಿದ್ದರೆ, ನಾನು ನಿಮ್ಮನ್ನು ಹೊರಗೆ ಬಿಸಾಡಬೇಕಾಗುತ್ತದೆ. ಕುಳಿತು ಆಲಿಸಿ, ಅಥವಾ ಹೊರ ನಡೆಯಿರಿʼ ಎಂದು ಬಿಜೆಪಿ ಸದಸ್ಯರಿಗೆ ಹೇಳಿದರು.
ಬಿಜೆಪಿ ಸದಸ್ಯ ಹರೀಶ್ ಪೂಂಜಾ ಅವರು ಬೇರೆ ಸದಸ್ಯರ ಆಸನದಲ್ಲಿ ಇದ್ದಾಗ ಅವರಿಗೆ ʼ ನಿನ್ನ ಸೀಟಿಗೆ ಹೋಗಿ ಮಾತನಾಡು, ಇಲ್ಲಾಂದ್ರೆ ಹೊರಗಡೆ ನಡಿ ಗೆಟ್‌ಔಟ್ʼ ಎಂದು ತಾಳ್ಮೆ ಕಳೆದು ವಾರ್ನಿಂಗ್ ಮಾಡಿದರು. ಬಿಜೆಪಿ ಸದಸ್ಯರು ಪದ ಬಳಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಅಂಬೇಡ್ಕರ್ ಕುರಿತು ಮಾತನಾಡುವಾಗ ಬಿಸಾಡುತ್ತೇನೆ ಎಂದರೆ ಏನರ್ಥ? ನಾವು ಬಿಟ್ಟಿಗೆ ಬಂದಿದ್ದೇವಾ? ಎಂದು ಹರೀಶ್ ಪೂಂಜಾ ಅಸಮಾಧಾನ ವ್ಯಕ್ತಪಡಿಸಿದರು. ಆಗ ಸ್ಪೀಕರ್ ʼ ಮಂಗಳೂರಿನ ಜ್ಯೋತಿಯಲ್ಲಿ ಅಂಬೇಡ್ಕರ್ ಸರ್ಕಲ್ ಕಟ್ಟಿ ಎಷ್ಟು ವರ್ಷವಾಯಿತು? ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ. ಇಲ್ಲಿ ಮಾತನಾಡುತ್ತೀರಾ?ʼ ಎಂದು ತಿರುಗೇಟು ನೀಡಿದರು.
Comments are closed.