Muncipal Council: ಕೈ ಕೊಟ್ಟ ನಗರಸಭೆ ಅಳವಡಿಸಿದ್ದ ಸಿಸಿ ಕ್ಯಾಮಾರಗಳು! ಮತ್ತೆ ಪ್ರತ್ಯಕ್ಷವಾದ ಕಸಾಸುರರು

Waste management: ಮಡಿಕೇರಿ ನಗರದ ಹಲವೆಡೆ ರಸ್ತೆ ಬದಿ ಕಸ ಹಾಕುವುದನ್ನು ತಡೆಗಟ್ಟುಲು ನಗರಸಭೆ ಸಿಸಿ ಕ್ಯಾಮೆರಾ ಮೊರೆ ಹೋಗಿತ್ತು. ಒಂದಿಷ್ಟು ದಿನಗಳು ಕ್ಯಾಮೆರಾ ಅಳವಡಿಸಿದ ಸ್ಥಳದಲ್ಲಿ ಕಸ ಹಾಕೋದು ನಿಂತು ಹೋಗಿತ್ತು. ಆದರೆ ಇವಾಗ ಮತ್ತೆ ಅದೇ ಚಾಳಿಯನ್ನು ಕೆಲವು ನಾಗರಿಕರು ಪ್ರಾರಂಭ ಮಾಡಿದ್ದಾರೆ, ಬಸ್ಸಪ್ಪ ಶಿಶು ವಿಹಾರ ಎದುರು ರಾಶಿ ರಾಶಿ ಕಸ ಬೀಳುತ್ತಿದೆ. ಅಲ್ಲೇ ಪಕ್ಕದಲ್ಲಿ ನಗರಸಭಾ ಆಯುಕ್ತರ ಸರ್ಕಾರಿ ನಿವಾಸ ಇದ್ದರು ಅಸಹಾಕರಿಗಿದ್ದಾರೆ.
ಇನ್ನೂ ಅರೋಗ್ಯ ಶಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ ಅನ್ನೋ ಅನುಮಾನ. ಅಲ್ಲಿ ಬಿಸಾಡುವ ಹಸಿ ತ್ಯಾಜ್ಯವನ್ನು ಬೀದಿ ನಾಯಿಗಳು ತಿನ್ನಲು ರಸ್ತೆ ಪೂರ್ತಿ ಎಳೆದುಹಾಕುತ್ತೆ. ನಗರಸಭೆಯು, ಮೇಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಸ ಹಾಕುವವರ ಮೇಲೆ ದೊಡ್ಡ ಮೊತ್ತದ ದಂಡ ವಸೂಲಿ ಮಾಡಿ, ಮುಂದೆ ಈ ರೀತಿ ಕಸ ಹಾಕದಂತೆ ಕ್ರಮವಹಿಸಬೇಕು ಅನ್ನೋದು ಸಾರ್ವಜನಿಕರ ಒಕ್ಕೊರಲ ಬೇಡಿಕೆ.
Comments are closed.