Renuka Swamy Case: ದರ್ಶನ್‌ & ಗ್ಯಾಂಗ್‌ ಜಾಮೀನು ರದ್ದು ಅರ್ಜಿ ವಿಚಾರಣೆಗೆ ದಿನ ನಿಗದಿ!

Share the Article

Renuka Swamy Case: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಸಿಕ್ಕ ಆರೋಪಿಗಳ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಆರೋಪಿಗಳ ಜಾಮೀನು ರದ್ದು ಕೋರಿ ಪೊಲೀಸ್‌ ಇಲಾಖೆ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.

ದರ್ಶನ್‌, ಪವಿತ್ರಾಗೌಡ, ನಾಗರಾಜ್‌, ಲಕ್ಷ್ಮಣ್‌, ಅನುಕುಮಾರ್‌, ಜಗದೀಶ್‌, ಪ್ರದೋಶ್‌ ಅವರ ಜಾಮೀನು ಅರ್ಜಿ ಪ್ರಶ್ನೆ ಮಾಡಿ ಪೊಲೀಸರು ಮೇಲ್ಮನವಿಯನ್ನು ಸಲ್ಲಿಕೆ ಮಾಡಿದ್ದೃು. ಆದರೆ ಈ ಅರ್ಜಿಯ ವಿಚಾರಣೆ ಇಲ್ಲಿಯವರೆಗೆ ನಡೆದಿಲ್ಲ. ಈ ಕುರಿತು ವಕೀಲ ಅನಿಲ್‌ ಕುಮಾರ್‌ ನಿಶಾನಿ ಅವರು ಅರ್ಜಿಯ ವಿಚಾರಣೆ ನಡೆಸುವಂತೆ ಸುಪ್ರೀಂಗೆ ಮನವಿ ಮಾಡಿದ್ದಾರೆ.

ಇದಕ್ಕೆ ಸ್ಪಂದಿಸಿದ ಸುಪ್ರೀಂ, ಜಾಮೀನು ರದ್ದು ಕೋರಿ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಎಪ್ರಿಲ್‌ 2 ರಂದು ವಿಚಾರಣೆ ಮಾಡಲಾಗುವುದು ಎಂದು ಹೇಳಿದೆ.

Comments are closed.