H M Revanna: ಕಾಂಗ್ರೆಸ್‌ ಕಾರ್ಯಕರ್ತೆ ಮೇಲೆ ಸಿಎಂ ಆಪ್ತ HM ರೇವಣ್ಣ ಹಲ್ಲೆ; ದೂರು ದಾಖಲು

H M Revanna: ಮಾಜಿ ಸಚಿವ ಹೆಚ್‌.ಎಂ.ರೇವಣ್ಣ ಕಾಂಗ್ರೆಸ್‌ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆ ನಂದಿನಿ ನಾಗರಾಜ್‌ ದೂರನ್ನು ದಾಖಲು ಮಾಡಿದ್ದಾರೆ.

ರೇವಣ್ಣ ಅವರು ಕರ್ನಾಟಕ ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ರೇವಣ್ಣ ಅವರು ನಂದಿನಿಯನ್ನು ತಳ್ಳುತ್ತಿರುವ ವೀಡಿಯೋ ಸಾಕ್ಷ್ಯವನ್ನು ನಂದಿನಿ ಪೊಲೀಸರಿಗೆ ನೀಡಿದ್ದಾರೆ. ವೀಡಿಯೋದಲ್ಲಿ ರಾಹುಲ್‌ ಗಾಂಧಿಗೆ ಈ ವಿಷಯವನ್ನು ವರದಿ ಮಾಡಿ ವೀಡಿಯೋ ಕಳುಹಿಸುವುದಾಗಿ ಕೇಳಿ ಬಂದಿದೆ. ಹೆಚ್.ಎಂ.ರೇವಣ್ಣ ಸಿಎಂ ಆಪ್ತ.

ಈ ಕುರಿತು ಹೆಚ್‌.ಎಂ.ರೇವಣ್ಣ ಅವರು, ” ಆ ಮಹಿಳೆ ನನಗೆ ಕಿರಿಕಿರಿ ಮಾಡಿಕೊಂಡು ಗಲಾಟೆ ಮಾಡುತ್ತಿದ್ದರು. ಪದೇ ಪದೇ ರಾಹುಲ್‌ ಗಾಂಧಿ ಹೆಸರು ಹೇಳುತ್ತಿದ್ದಳು. ಕೊಲೆ ಮಾಡಲು ಬಂದಿದ್ದರು. ಹೊಡೆದರು ಅನ್ನೋದು ಸರಿಯಲ್ಲ. ವಿಡಿಯೋ ಮಾಡಬೇಡ ಎಂದು ಮೊಬೈಲ್‌ ತಳ್ಳಿದ್ದು ನಿಜ. ಆಕೆಯ ಮೇಲೆ ಹಲ್ಲೆ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು.

 

Comments are closed.