Chamarajanagara: ಮದುವೆಗೆ ಕನ್ಯೆ ಸಿಗದ ಟೆನ್ಷನ್‌ಗೆ ಹೈ-ಟೆನ್ಷನ್‌ ಕಂಬ ಏರಿದ ಯುವಕ, ಇಳಿಯುವಾಗ ಸಾವು!

Share the Article

Chamarajanagara: ಮದುವೆ ಮಾಡಿಕೊಳ್ಳಲು ಹುಡುಗಿ ಸಿಗದೇ ಇರುವ ಕಾರಣದಿಂದ ನೊಂದ ಯುವಕನೊಬ್ಬ ಹೈಟೆನ್ಷನ್‌ ಕಂಬ ಏರಿದ್ದು, ನಂತರ ಗ್ರಾಮಸ್ಥರು, ತಾಯಿ ಸೇರಿ ಯುವಕನಿಗೆ ಇಳಿಯುವಂತೆ ಸೂಚಿಸಿದ್ದಾರೆ. ಆದರೆ ಯುವಕನ ದುರಂತವೇನೆಂದರೆ, ಎಲ್ಲರ ಮಾತು ಕೇಳಿ ಸಮಾಧಾನ ಪಟ್ಟು ಕೆಳಗೆ ಇಳಿಯುವಾಗ ವಿದ್ಯುತ್‌ ತಂತಿ ತಗುಲು ಸಾವಿಗೀಡಾಗಿದ್ದಾನೆ. ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ಕುಡಿದ ಮತ್ತಿನಲ್ಲಿ ಯುವಕ ಮಸಣಶೆಟ್ಟಿ ವಿದ್ಯುತ್‌ ಕಂಬ ಏರಿದ್ದ. ಆದರೆ ಇಳಿಯುವಾಗ ವಿದ್ಯುತ್‌ ತಂತಿ ತಗುಲಿ ಸಾವಿಗೀಡಾದ.

ಮದುವೆಯಾಗಲು ಹೆಣ್ಣು ದೊರಕದ ಕಾರಣ ಮಸಣ ಶೆಟ್ಟಿ ಕುಡಿತದ ದಾಸನಾಗಿದ್ದ. ಮಸಣಶೆಟ್ಟಿಯನ್ನು ನೋಡಲು ಎರಡು ಬಾರಿ ಹೆಣ್ಣಿನ ಕಡೆಯವರು ಬಂದಿದ್ದು, ಮನೆ ಚಿಕ್ಕದು, ಆಸ್ತಿಪಾಸ್ತಿ ಏನಿಲ್ಲ ಎಂದು ತಿರಸ್ಕಾರ ಮಾಡಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಆತ ಒಳಗಾಗಿದ್ದ. ಇಂದು ತಾಯಿ ಕಣ್ಣೆದುರೇ ಮೃತ ಹೊಂದಿದ್ದಾನೆ.

Comments are closed.