Madikeri: ನೆಹರು ನಗರ ಬೆಟ್ಟದಲ್ಲಿ ಆಕಸ್ಮಿಕ ಬೆಂಕಿ ಅವಘಡ, ತಪ್ಪಿದ ಬಾರಿ ಅನಾಹುತ

Madikeri: ಕಳೆದ ಒಂದು ವಾರದಿಂದ ಮಡಿಕೇರಿಯ ಮಲೆತಿರುಕೆ ಬೆಟ್ಟ ಹಾಗೂ ಎರಡು ದಿನಗಳ ಹಿಂದೆ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ಅವಘಡ(Fire Accident) ಸಂಭವಿಸಿದ ಘಟನೆ ಮರೆಯಾಗುವಷ್ಟರಲ್ಲಿ ನೆಹರು ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಸ್ಥಳೀಯರ ಮುನ್ನೆಚ್ಚರಿಕೆಯಿಂದ ನೀರು ಮತ್ತು ಮರದ ಸೊಪ್ಪುಗಳಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲದಿದ್ದಲ್ಲಿ ಅಕ್ಕ ಪಕ್ಕದ ಮನೆಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇತ್ತು.

ಸ್ಥಳೀಯರು, ಪುರಸಭೆಯ ಹಾಗೂ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ನಂದಿಸುತ್ತಿದ ಅಗ್ನಿಶಾಮಕ ದಳದ ವಾಹನ ನೆಹರು ನಗರ ಬೆಟ್ಟಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಈ ಮೂಲಕ ಬೆಂಕಿಯಿಂದ ಆಗುತ್ತಿದ್ದ ಬಾರಿ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದೆ.

ಈ ಸಂಧರ್ಭ ಪುರಸಭೆ ಅಧ್ಯಕ್ಷರಾದ ಶ್ರೀ ಮತಿ ದೇಚಮ್ಮಕಾಳಪ್ಪ, ಮುಖ್ಯಧಿಕಾರಿ ನಾಚಪ್ಪ, ಪರಿಸರ ಅಭಿಯಂತರರು ನಗರ ಪೋಲಿಸ್ ಠಾಣಾಧಿಕಾರಿ, ಪುರಸಭೆ ಸದಸ್ಯರು, ಮಾಜಿ ಸದಸ್ಯರಗಳು ಕುಮಾರ್, ಕಂದಾಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಆನೆ ಕಾರ್ಯಚರಣೆಯ ಸಿಬ್ಬಂದಿಗಳು, ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು‌, ಪುರಸಭೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದರು.

Comments are closed.