NEET Exam: ಒಪ್ಪೊತ್ತು ಊಟ, 27 ಲಕ್ಷ ತಂದೆಗಾಗಿ ಮಾಡಿದ ಸಾಲ: ಈ ಮಧ್ಯೆ ನೀಟ್ ಪರೀಕ್ಷೆ ಬರೆದು ಗೆದ್ದ ಡ್ರೈವರ್ ಮಗಳು

NEET UG Exam: ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಬದುಕು. ಇದರ ಜೊತೆಗೆ ಬರೋಬ್ಬರಿ 27 ಲಕ್ಷ ಸಾಲ ಮಾಡಿ ಮರಣ ಹೊಂದಿದೆ ತಂದೆ. ಇಂಥಹ ಕಠೋರ ಜೀವನದ ಮಧ್ಯೆಯೂ ತಮ್ಮ ಕನಸನ್ನು ನನಸಾಗಿಸಿ ದೇಶಕ್ಕೇ ಮಾದರಿಯಾಗಿದ್ದಾರೆ ರಾಜಸ್ಥಾನದ ಕೋಟಾದ ಪ್ರೇರಣಾ ಸಿಂಗ್(Prerna Singh). ಅತ್ಯಂತ ಕಠಿಣ ನೀಟ್ ಯುಜಿ ಪರೀಕ್ಷೆಯಲ್ಲಿ 720 ರಲ್ಲಿ 686 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಅವರ ಪ್ರಯಾಣ ಸುಲಭವಾಗಿರಲಿಲ್ಲ. ಪ್ರೇರಣಾ 2018ರಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ತಮ್ಮ ತಂದೆಯನ್ನು ಕ್ಯಾನ್ಸರ್ನಿಂದ ಕಳೆದುಕೊಂಡರು. ಅವರ ಕುಟುಂಬವು ₹27 ಲಕ್ಷ ಸಾಲವನ್ನು ಹೊಂದಿತ್ತು, ಮತ್ತು ಅವರು ದಿನದ ಒಂದು ಹೊತ್ತಿನ ಊಟವನ್ನು ಮಾತ್ರ ತಿನ್ನುತ್ತಾ ಬದುಕಬೇಕಾಯಿತು. ಇದರೊಂದಿಗೆ ಛಲ ಬಿಡದೆ ಪ್ರತಿದಿನ 12 ಗಂಟೆಗಳ ಕಾಲ ಅಧ್ಯಯನ ಮಾಡಿ ತಮ್ಮ ಗುರಿಯನ್ನು ತಲುಪಿದ್ದಾರೆ.
ತರಬೇತಿ ಶುಲ್ಕಕ್ಕಾಗಿ ಸಂಬಂಧಿಕರ ಬೆಂಬಲದೊಂದಿಗೆ, ಅವರು ಅಭ್ಯಾಸದ ಕಡೆ ಗಮನಹರಿಸಿದರು. ಅದರ ಜೊತೆಗೆ ಜೀವನಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುವ ಅನಿವಾರ್ಯತೆ. ಈಗ, ಅವರು ವೈದ್ಯೆಯಾಗುವ ಮತ್ತು ವೈದ್ಯಕೀಯ ಸಂಶೋಧನೆಗೆ ತಮ್ಮಿಂದಾಗುವ ಕೊಡುಗೆ ನೀಡುವ ಮಹತ್ತರ ಕನಸು ಕಾಣುತ್ತಿದ್ದಾರೆ. ಪ್ರೇರಣಾ ಅವರ ಜೀವನ ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯಕ್ಕೆ ನಿಜವಾದ ಉದಾಹರಣೆಯಾಗಿದೆ.
Comments are closed.