West Bengal: ಜೀವಂತ ಮಗಳ ಶ್ರಾದ್ಧ ಮಾಡಿದ ಪೋಷಕರು!

Share the Article

West Bengal: ತಮ್ಮ ಜೀವಂತ ಮಗಳ ಶ್ರಾದ್ಧ ನೆರವೇರಿಸಿ ಪಿಂಡ ಇಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಚೋಪ್ರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಸೋನಾಪುರ ಗ್ರಾಮ ಪಂಚಾಯತ್‌ನ ಜುವಾಖುರಿ ಅಗ್ನಿಬರಿ ಪ್ರದೇಶದಲ್ಲಿ ನಡೆದಿದೆ.

ಮಗಳು ಓಡಿ ಹೋಗಿ ಮದುವೆಯಾಗಿದ್ದನ್ನು ಸಹಿಸಲಾಗದೆ ದಂಪತಿ ಈ ಕೆಲಸ ಮಾಡಿದ್ದಾರೆ. ಹಲವು ಬಾರಿ ಮನವೊಲಿಸಲು ಪ್ರಯತ್ನ ಪಟ್ಟರೂ ಆಕೆ ಮನೆಗೆ ಬರಲು ಒಪ್ಪಲಿಲ್ಲ. ಆಕೆ ಜೀವಂತವಿದ್ದರೂ ಕೂಡಾ ಶ್ರಾದ್ಧ ಮಾಡಲು ಮುಂದಾಗಿದ್ದು, ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಹಾಜರಿದ್ದರು. ಇಡೀ ಕುಟುಂಬ ಅಳುತ್ತಲೇ ಮಗಳ ಅಂತ್ಯಕ್ರಿಯೆ ಮಾಡಿದೆ.

ಮಗಳು ತಮ್ಮ ಪಾಲಿಗಿಲ್ಲ ಎನ್ನುವ ದೃಢ ನಿಶ್ಚಯ ಮಾಡಿದ್ದು, ಭವಿಷ್ಯದಲ್ಲಿ ಊರಿನ ಯಾವುದೇ ಹೆಣ್ಣುಮಗಳು ಈ ರೀತಿಯ ಕೆಲಸ ಮಾಡದಿರಲಿ ಎನ್ನು ಎಚ್ಚರಿಕೆಯಲ್ಲಿ ಈ ಕೆಲಸ ಮಾಡಿದ್ದಾರೆ.

Comments are closed.