UP Ram Temple: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನಿಂದ ಬರೋಬ್ಬರಿ 400 ಕೋಟಿ ರೂ. ತೆರಿಗೆ ಪಾವತಿ!

Ayodhya: ಕಳೆದ 5 ವರ್ಷದಲ್ಲಿ ರಾಮಮಂದಿರ ಟ್ರಸ್ಟ್ 400 ಕೋಟಿ ರು. ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ ಹೇಳಿದ್ದಾರೆ.

2020ರ ಫೆ.5 ರಿಂದ 2025ರ ಫೆ.5ವರೆಗೆ 270 ಕೋಟಿ ರು.ಗಳನ್ನು ಜಿಎಸ್‌ಟಿ ರೂಪದಲ್ಲಿ, 130 ಕೋಟಿ ರು. ಗಳನ್ನು ಇತರೆ ತೆರಿಗೆ ವರ್ಗಗಳ ಅಡಿ ಪಾವತಿಸಲಾಗಿದೆ. ಕಳೆದ ವರ್ಷ 16 ಕೋಟಿ ಜನರು ಅಯೋಧ್ಯೆಗೆ ಭೇಟಿ ನೀಡಿದ್ದು, ಮಂದಿರಕ್ಕೆ 5 ಕೋಟಿ ಜನ ಬಂದಿದ್ದಾರೆ. ಜ.13ರಿಂದ ಫೆ.26ರವರೆಗೆ ನಡೆದ ಕುಂಭಮೇಳದ ಅವಧಿಯಲ್ಲಿ 1.6 ಕೋಟಿ ಭಕ್ತರು ಭೇಟಿ ನೀಡಿದ್ದಾರೆ.

Comments are closed.