Heart Attack: ಚಾಲನೆ ವೇಳೆಯೇ ಹೃದಯಾಘಾತ, ಹಲವು ವಾಹನಗಳಿಗೆ ಡಿಕ್ಕಿ

Heart Attack: ಪ್ರಯಾಣಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ನಿಯಂತ್ರಣ ತಪ್ಪಿದ ಕಾರು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
ಹೃದಯಾಘಾತದಿಂದ ಮೃತಪಟ್ಟ ಚಾಲಕನನ್ನು ಧೀರಜ್ ಪಾಟೀಲ್ (55) ಎಂದು ಗುರುತಿಸಲಾಗಿದೆ. ಪಾಟೀಲ್ ಶನಿವಾರ ಮುಂಜಾನೆ ಕಚೇರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.
Comments are closed.