Death: ಟೂತ್ಪೇಸ್ಟ್ ಎಂದು ತಪ್ಪು ತಿಳಿದು ಇಲಿ ವಿಷ ಸೇವಿಸಿದ ಮಗು ಮೃತ್ಯು!

Share the Article

Death: ಅಟ್ಟಪ್ಪಾಡಿ ಜಿಲ್ಲೆಯ ಜೆಲ್ಲಿಪಾರ ಒಮಲ ನಿವಾಸಿ ಮೂರು ವರ್ಷದ ನೇಹ ಎಂಬ ಬಾಲಕಿ ಇಲಿ ವಿಷ ಸೇವಿಸಿದ್ದರಿಂದ ಮೃತಪಟ್ಟಿದೆ. ಮನೆಯಲ್ಲಿ ಗೋಡೆಗಳಿಗೆ ಬಣ್ಣ ಹಾಕುವ ಕೆಲಸ ನಡೆಯುತ್ತಿದ್ದ ಸಮಯದಲ್ಲಿ, ಅಲ್ಲಿ ಇಲಿ ವಿಷದ ಸಾಮಗ್ರಿಗಳನ್ನು ಇಡಲಾಗಿತ್ತು. ಈ ಸಾಮಗ್ರಿಗಳನ್ನು ಟೂತ್ಪೇಸ್ಟ್ ಎಂದು ತಪ್ಪಾಗಿ ಅರ್ಥೈಸಿಕೊಂಡ ಮಗು ಅದನ್ನು ಹಲ್ಲು ಉಜ್ಜಲು ಬಳಸಿದ್ದು, ಅನಂತರ ಅಸ್ವಸ್ಥಗೊಂಡಿತು.

ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ನಂತರ ತ್ರಿಶೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ, ಮಗುವನ್ನು ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ತ್ವರಿತವಾಗಿ ರೆಫರ್ ಮಾಡಲಾಯಿತು. ಆದರೆ, ಮಗು ಬದುಕಲಿಲ್ಲ(Death) .

Comments are closed.