Agriculture Course: ಕೃಷಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

Share the Article

Agriculture Course: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮ ಮತ್ತು ಐದು ಸರ್ಟಿಫಿಕೇಟ್ ಕೋಸ್ ಡಿಪ್ಲೊಮಾ ಕೋರ್ಸ್‌ಗೆ 10 ಸಾವಿರ ರೂಪಾಯಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎರಡು ಡಿಪ್ಲೋಮಾ ಮತ್ತು ಐದು ಸರ್ಟಿಫಿಕೇಸ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ.

ಒಂದು ವರ್ಷದ ಸಿಪ್ಲೊಮಾ ಕೋರ್ಸ್‌ಗೆ 10 ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವರ್ಷದ ಸ್ನಾತಕೋತ್ತರ ಕೋರ್ಸ್‌ಗೆ 12 ಸಾವಿರ ಶುಲ್ಕವಿದ್ದು, ಕೃಷಿ ಪದವೀಧರರು ಅರ್ಜಿ ಹಾಕಬಹುದಾಗಿದೆ.

ಸರ್ಟಿಫಿಕೇಟ್‌ ಕೋರ್ಸ್‌ಗಳಾದ ಬೀಜೋತ್ಪಾದನೆ ತಾಂತ್ರಿಕತೆ ಮತ್ತು ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆಗೆ 3 ಸಾವಿರ ಶುಲ್ಕವಿದ್ದು, 10ನೇ ತರಗತಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಜೇನು ಸಾಕಣೆ ಕೋರ್ಸ್ ಗೆ 3 ಸಾವಿರ ರು. ಸಮಗ್ರ ಕೃಷಿ ಕೋರ್ಸ್‌ಗೆ 1.5 ಸಾವಿರ ಶುಲ್ಕವಿದ್ದು, 7ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.

ಸಾವಯವ ಕೃಷಿ (ಅಂಚೆ ಶಿಕ್ಷಣ) ಕೋರ್ಸ್‌ಗಳಿಗೆ ಶುಲ್ಕ 200 ರು., ಓದು ಬರಹ ಬಲ್ಲವರು ಅರ್ಜಿ ನೀಡಬಹುದಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳಾದ ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಬೆಂಗಳೂರು ಗ್ರಾ. ಮಾಂ ಮತ್ತು ತುಮಕೂರು ಜಿಲ್ಲೆಗಳಲ್ಲಿ ವಿಸ್ತರಣಾ ಶಿಕ್ಷಣ ಘಟಕ, ಮೈಸೂರಿನಲ್ಲಿ ಅರ್ಜಿ ಪಡೆಯಬಹುದಾಗಿದೆ.

ಬೆಂಗಳೂರು ಕೃಷಿ ವಿವಿ ಜಾಲತಾಣ www.uasbangalore.edu.in ರಿಂದ ಕೂಡಾ ಅರ್ಜಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಕೋರ್ಸ್‌ ಶುಲ್ಕವನ್ನು ಡಿಡಿ ಮೂಲಕ ಪಡೆದು ಏ.12 ಮಧ್ಯಾಹ್ನ 12.30 ರ ಒಳಗೆ ಸಂಯೋಜಕರು ಮತ್ತು ಮುಖ್ಯಸ್ಥರು, ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ, ಬೆಂಗಳೂರು – 560065 ಅವರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

Comments are closed.