Chitradurga : ಕುಡಿಯುವ ನೀರಿನ ವಿಚಾರಕ್ಕೆ ಗಲಾಟೆ – ನಿಂತೆ ಹೋಯ್ತು ಮರುದಿನ ಆಗಬೇಕಿದ್ದ ಮದುವೆ!!

Chitradurga : ಕೆಲವೊಂದು ಕ್ಷುಲ್ಲಕ ಕಾರಣಗಳಿಗೆ ಎಲ್ಲಾ ರೀತಿಯಿಂದಲೂ ತಯಾರಿ ಮಾಡಿಕೊಂಡಿದ್ದ ಮದುವೆಗಳು ಮುರಿದು ಬಿದ್ದಂತಹ ಪ್ರಕರಣಗಳನ್ನು ನೋಡಿದ್ದೇವೆ. ಅಂತಯೇ ಇದೀಗ ನೀರಿನ ವಿಚಾರಕ್ಕೆ ಗಲಾಟೆ ನಡೆದು ಮರುದಿನ ನಡೆಯಬೇಕಿದ್ದ ಮದುವೆಯೇ ನಿಂತು ಹೋದಂತಹ ವಿಚಿತ್ರ ಪ್ರಕರಣ ಚಿತ್ರದುರ್ಗದ(Chitradurga )ಲ್ಲಿ ಬೆಳಕಿಗೆ ಬಂದಿದೆ.

ಹೌದು, ದಾವಣಗೆರೆ ಜಿಲ್ಲೆ ಜಗಳೂರಿನ ವರ ಎನ್‌.ಮನೋಜ್‌ಕುಮಾರ್‌, ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚಿರತಹಳ್ಳಿ ವಧು ಸಿ.ಎ.ಅನಿತಾ ವಿವಾಹದ ಆರತಕ್ಷತೆ ಸಮಾರಂಭ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ ರಾತ್ರಿ ನಡೆಯಿತು. ಈ ಸಂದರ್ಭದಲ್ಲಿ ಊಟಕ್ಕೆ ಕುಳಿತವರ ನಡುವೆ ಕುಡಿಯುವ ನೀರಿನ ವಿಚಾರವಾಗಿ ಗಲಾಟೆ ಶುರುವಾಗಿದೆ. ಈಗಲಾಟೆ ಬೆಳಗ್ಗೆಯವರೆಗೂ ಮುಂದುವರಿದಿದೆ.

ಇನ್ನೂ ಭಾನುವಾರ ಬೆಳಿಗ್ಗೆ 10.30ಕ್ಕೆ ಮುಹೂರ್ತ ನಿಗದಿಯಾಗಿತ್ತು. ಸಂಬಂಧಿಕರು ಸಾಕಷ್ಟು ಪ್ರಯತ್ನಪಟ್ಟರೂ ಜಗಳ ಬಗೆಹರಿಸಲು ಸಾಧ್ಯವಾಗಲಿಲ್ಲ. ಎಂಜಿನಿಯರಿಂಗ್‌ ಪದವೀಧರರಾದ ವಧು-ವರರಿಬ್ಬರೂ ಜಗಳದಲ್ಲಿ ಭಾಗಿಯಾದ ಕಾರಣ ವಿವಾಹ ಮುರಿದು ಬಿದ್ದಿದೆ.

Comments are closed.