Holi: ಬಣ್ಣ ಹಚ್ಚುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಎಲ್ಲೆಲ್ಲೋ ಮುಟ್ಟಿದ ಪ್ರಿನ್ಸಿಪಲ್- ವಿಡಿಯೋ ವೈರಲ್

Holi: ಕೆಲವು ದಿನಗಳ ಹಿಂದಷ್ಟೇ ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ವಿವಿಧ ರೀತಿಯ ಬಣ್ಣಗಳನ್ನು ಎರಚಿ ಜನ ಬಣ್ಣದೋಕುಳಿಯನ್ನು ಆಡಿದ್ದಾರೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳಂತೂ ಈ ಹಬ್ಬವನ್ನು ಅತೀ ಸಂತೋಷದಿಂದ ಆಚರಿಸಿದ್ದಾರೆ. ಆದರೆ ಇದೇ ವೇಳೆ ನಡೆಯಬಾರದಂತ ಘಟನೆಯೊಂದು ನಡೆದಿದೆ.

ಹೋಳಿ ಹಬ್ಬದಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನೆಲ್ಲ ಬಿಟ್ಟು ಹೋಳಿ ಆಡುತ್ತಾರೆ. ಆಂಧ್ರಪ್ರದೇಶದ ಕದಿರಿ ಜಿಲ್ಲೆಯ ಅಮೃತವಳ್ಳಿಯ ಶ್ರೀ ಸತ್ಯಸಾಯಿ ಮಹಿಳಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತರಗತಿ ಬಿಟ್ಟು ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು. ಈ ವೇಳೆ ಕಾಲೇಜು ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಹೌದು, ಪ್ರಾಂಶುಪಾಲ ವೆಂಕಟಪತಿ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ನೀರು ಚಿಮುಕಿಸಿ ಆಟವಾಡಿದ್ದಾರೆ.. ಅಲ್ಲಿಗೆ ನಿಲ್ಲಿಸದೆ ವಿದ್ಯಾರ್ಥಿನಿಯನ್ನು ಎತ್ತಿಕೊಂಡು ಹೋಗಿ ಕೆಸರಿನಲ್ಲಿ ಬೀಳಿಸಿ ಉರುಳಾಡಿಸಿದ್ದಾರೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.