Ramanagara: ಶೌಚಾಲಯದಲ್ಲಿ ‘ಪಾಕಿಸ್ತಾನಕ್ಕೆ ಜೈ, ಕನ್ನಡಿಗರು ಸೂ*…’ ಎಂದು ಬರೆದ ದುರುಳರು!!

Ramanagara : ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆಗಳು ಹಾಗೂ ಕನ್ನಡಿಗರನ್ನು ನಿಂದಿಸುವಂತಹ ಅನೇಕ ಪ್ರಕರಣಗಳು ಇತ್ತೀಚಿಗೆ ಬೆಳಕಿಗೆ ಬರುತ್ತವೆ. ಅಂತೆಯೇ ಇದೀಗ ರಾಮನಗರದಲ್ಲಿ ಪಾಕಿಸ್ತಾನ ಪರ ಬರವಣಿಗೆಗಳು ಪತ್ತೆಯಾಗಿದ್ದು ಜೊತೆಗೆ ಕನ್ನಡಿಗರನ್ನು ನಿಂದಿಸಿ ಬರೆದ ಕೆಲವು ಉಕ್ತಿಗಳು ಕೂಡ ಪತ್ತೆಯಾಗಿದೆ.
ಹೌದು, ಬಿಡದಿಯಲ್ಲಿರುವ ಖಾಸಗಿ ಕಂಪನಿಯ ಟಾಯ್ಲೆಟ್‌ನಲ್ಲಿ “ಪಾಕಿಸ್ತಾನ ಜೈ, ಕನ್ನಡಿಗರು ಸೂ* ಮಕ್ಕಳು ಎಂಬ ಬರಹ ಕಂಡುಬಂದಿದೆ. ಎಂದು ಬರೆಯಲಾಗಿದೆ. ಇದು ಟೊಯೋಟಾ ಬುಶೋಕುನಲ್ಲಿ ನಡೆದಿದ್ದು ಎನ್ನಲಾಗಿದೆ. ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಹೇಳಲಾಗುತ್ತಿದೆ.
ಇಂತಹ ದೇಶದ್ರೋಹದ ಕೆಲಸ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ವಿಚಾರ ತಿಳಿದು ಕನ್ನಡಪರ ಸಂಘಟನೆಗಳು ಕೂಡ ಸ್ಥಳಕ್ಕೆ ಧಾವಿಸಿ ಬೃಹತ್ ಪ್ರತಿಭಟನೆ ನಡೆಸಿವೆ. ಇನ್ನು ಈ ದೇಶದ್ರೋಹದ ಕೃತ್ಯ ಮಾಡಿರುವ ವಿಚಾರವಾಗಿ ತಮ್ಮ ಸಿಬ್ಬಂದಿಗೆ ಕಂಪನಿಯು ಎಚ್ಚರಿಕೆಯ ಸುತ್ತೋಲೆ ಕೂಡ ಹೊರಡಿಸಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದೆ. ಬಿಡಿದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದನ್ನು ಬರೆದಿದ್ದು ಯಾರು ಎಂದು ಇಲ್ಲಿವರೆಗೆ ತಿಳಿದುಬಂದಿಲ್ಲ.
Comments are closed.