Vehicle: ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಲಾವಣೆ: 20 ಸಾವಿರ ದಂಡ ತೆತ್ತ ತಂದೆ!

Share the Article

Vehicle: ಅಪ್ರಾಪ್ತನ ವಯಸ್ಸಿನ ಮಗನಿಗೆ ದ್ವಿಚಕ್ರ ವಾಹನವನ್ನು (Vehicle) ಚಲಾಯಿಸಲು ನೀಡಿದ ತಂದೆಗೆ ರೂ. 20 ಸಾವಿರ ರೂ. ದಂಡ ಹಾಕಲಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ತಲ್ತಾರೆ ಶೆಟ್ಟಳ್ಳಿ ಗ್ರಾಮದ ಯು.ಎಂ. ರಮೇಶ್ ಎಂಬುವವರು ಅಪ್ರಾಪ್ತ ವಯಸ್ಸಿನ ಪುತ್ರನಿಗೆ ದ್ವಿಚಕ್ರ ವಾಹನವನ್ನು ಚಲಾಯಿಸಲು ನೀಡಿದ್ದರು. ಈ ಕುರಿತು ಸೋಮವಾರಪೇಟೆ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರಾದ ಮುದ್ದು ಮಾದೇವ್ ಅವರು ಯು.ಎಂ. ರಮೇಶ್ ರವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಸೋಮವಾರಪೇಟೆ ಜೆ.ಎಂ.ಎಫ್.ಸಿ
ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಗೋಪಾಲಕೃಷ್ಣ ಅವರು ಇಂದು ರೂ. 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Comments are closed.