Kalaburagi : ಮಂಗಳಮುಖಿಯನ್ನು ಬೆತ್ತಲೆಮಾಡಿ, ತಲೆಬೋಳಿಸಿ ಹಲ್ಲೆ!!

Kalaburagi : ಮಂಗಳಮುಖಿ ಒಬ್ಬರನ್ನು ಬೆತ್ತಲೆ ಮಾಡಿ, ತಲೆಬೋಳಿಸಿ ಹಲ್ಲೆ ನಡೆಸಿರುವಂತಹ ಅಘಾತಕಾರಿ ಘಟನೆಯೊಂದು ಕಲಬುರ್ಗಿಯಲ್ಲಿ ನಡೆದಿದೆ.
ಹೌದು, ಅಂಕಿತ ಎಂಬ ಮಂಗಳಮುಖಿಯನ್ನು ಬೆತ್ತಲೆ ಮಾಡಿ, ತಲೆಬೋಳಿಸಿ ಹಲ್ಲೆ ಮಾಡಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಿಕ್ಷಾಟನೆ ಮಾಡಿದ ಹಣದಲ್ಲಿ ಪಾಲು ನೀಡದ್ದಕ್ಕೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಹಲ್ಲೆಗೆ ಒಳಗಾದ ಮಂಗಳಮುಖಿಯನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶೀಲಾ, ಮಾಲಾ, ಭವಾನಿ ಸೇರಿ 6 ಜನ ಮಂಗಳಮುಖಿಯರು ಅಂಕಿತಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
Comments are closed.