Crime: ಮಡಿಕೇರಿ: ತೋಟದ ಮನೆಯಲ್ಲಿ ನವಜಾತ ಶಿಶು ಪತ್ತೆ!

Crime: ಮಾ. 15 ರಂದು ರಾತ್ರಿ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮಾವಟಿ ಪೆರೂರು ಗ್ರಾಮದ ತೋಳಂಡ ಪೂಣಚ್ಚ ಎಂಬವರು 112 ಪೊಲೀಸರಿಗೆ ಕರೆ ಮಾಡಿ ಯಾರೋ ನವಜಾತ ಶಿಶು ಒಂದನ್ನು ತನ್ನ ತೋಟದ ಲೈನ್ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ ಎಂದು ತಿಳಿಸಿದ್ದಾರೆ.

ಮಗುವಿನ ಮೇಲೆ ಇರುವೆಗಳು ಮುತ್ತಿಕೊಂಡಿತ್ತಲ್ಲದೇ ರಕ್ತದ ಮಡುವಿನಲ್ಲಿತ್ತು. ಕೂಡಲೇ ಪೂಣಚ್ಚರವರ ಮನೆಯಿಂದ ಬಟ್ಟೆಗಳನ್ನು ತರಿಸಿಕೊಂಡು ಮಗುವನ್ನು ಪ್ರಾಣಪಾಯದಿಂದ ರಕ್ಷಿಸಿ ನಾಪೋಕ್ಲು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ನಂತರ 108 ವಾಹನದಲ್ಲಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಮಗುವನ್ನು ರವಾನಿಸಿದ್ದಾರೆ.

Comments are closed.