Yatnal: ‘ಇಸ್ಲಾಂ’ ಎಂದರೆ ಬೇರೆ ಧರ್ಮಗಳನ್ನು ನಾಶಪಡಿಸುವುದು ಎಂದರ್ಥ – ಶಾಸಕ ಯತ್ನಾಳ್ ಹೇಳಿಕೆ

Yatnal: ಬಿಜೆಪಿ ನಾಯಕ ಹಾಗೂ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಅವರು ‘ಇಸ್ಲಾಂ’ ಎಂದರೆ ಬೇರೆ ಧರ್ಮಗಳನ್ನು ನಾಶಪಡಿಸುವುದು ಎಂದರ್ಥ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯ ಪಾಕಿಸ್ತಾನದ ಒಂದು ಭಾಗದಂತಾಗಿದೆ. ಇಸ್ಲಾಂ ಎಂದರೆ ಅನ್ಯ ಧರ್ಮಗಳನ್ನು ನಾಶಪಡಿಸುವುದು ಎಂದರ್ಥ ಎಂದು ಶಾಸಕ ಬಚನಗೌಡ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಅನ್ಯಕೋಮಿನವರಿಗೆ ಸರ್ಕಾರದ ಬಗ್ಗೆ ಸ್ವಲ್ಪವೂ ಭಯ ಇಲ್ಲದಂತಾಗಿದೆ. ಅವರು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ. ಸಚಿವರು ಕೂಡ ಏನನ್ನು ಮಾಡುತ್ತಿಲ್ಲ ಅವರೆಲ್ಲ ಜೀರೋ ಆಗಿದ್ದಾರೆ. ತಮ್ಮ ಸ್ಥಾನಕ್ಕೆ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡುತ್ತಿಲ್ಲ. ಸಿಎಂಗೆ ಹೇಳಿ ಬೇರೆ ಇಲಾಖೆಯನ್ನಾದರೂ ತೆಗೆದುಕೊಳ್ಳಲಿ ಎಂದು ಗ್ರಹದ ಚಿವರ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Comments are closed.