V Somanna: ಕರ್ನಾಟಕದಲ್ಲಿ 61 ಹೊಸ ರೈಲ್ವೆ ನಿಲ್ದಾಣಗಳ ಸ್ಥಾಪನೆ

V Somanna: ಕರ್ನಾಟಕದಲ್ಲಿ ಹಲವಾರು ಜಿಲ್ಲೆಗಳಲ್ಲಿ ಒಟ್ಟು 61 ಹೊಸ ರೈಲು ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ತುಮಕೂರಿನ ತುರುವೇಕೆರೆ ಪಟ್ಟಣದ ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಕೇಂದ್ರ ಸರ್ಕಾರದ ವಿಶೇಷ ಎಐಡಿಪಿ ಯೋಜನೆಯಡಿ ದಿವ್ಯಾಂಗರಿಗೆ ಉಚಿತ ಸಾಧನ ಸಲಕರಣೆ ವಿತರಣೆ ಮತ್ತು ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಸೋಮಣ್ಣ ಅವರು ಮುಂಬರುವ 2027ರ ವೇಳೆಗೆ ರಾಜ್ಯದಲ್ಲಿ61 ಹೊಸ ರೈಲು ನಿಲ್ದಾಣಗಳು ಸ್ಥಾಪನೆ ಆಗಲಿವೆ ಎಂದು ಹೇಳಿದರ.

ಅಲ್ಲದೆ ಸುಮಾರು 2000 ಕೋಟಿ ರೂ. ವೆಚ್ಚದಲ್ಲಿಈ ಹೊಸ ರೈಲು ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತದೆ. ಅಲ್ಲದೆ, ಈ ಅವಧಿಗೆ ಸುಮಾರು 12 ಸಾವಿರ ಕೋಟಿ ರೂ. ವೆಚ್ಚದಲ್ಲಿರೈಲ್ವೆ ನಿಲ್ದಾಣಗಳನ್ನು ಹೈಟೆಕ್‌ ಮಾದರಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

Comments are closed.