Puttur: ಬೆಳಂದೂರು: ಮದರಸ ಪಬ್ಲಿಕ್ ಪರೀಕ್ಷೆ; ಈಡನ್ ಶಾಲೆಗೆ ವಿಶಿಷ್ಟ ಶ್ರೇಣಿಯ ಫಲಿತಾಂಶ

Puttur: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ 2024-25 ನಡೆಸಿದ ಹತ್ತನೇ ತರಗತಿಯ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳಂದೂರು (Puttur) ಈಡನ್ ಗ್ಲೋಬಲ್ ಶಾಲೆಯ ಮದರಸ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹತ್ತೊಂಬತ್ತು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಮುಹಮ್ಮದ್ ತನ್ನೀಫ್ ಹಾಗೂ ಫಾತಿಮಾ ಶಾಯಿಫ 295 ಅಂಕದೊಂದಿಗೆ ಪ್ರಥಮ ಸ್ಥಾನ,ಅರ್ಶಾನ 293 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಅಮ್ನ ಫಾತಿಮಾ ಹಾಗೂ ಫಾತಿಮತ್ ನಿಮಿಯಾ 291 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
Comments are closed.