Tirupati: ತಿರುಪತಿ ದೇವಸ್ಥಾನ ದರ್ಶನದ ಹೆಸರಲ್ಲಿ ನಟಿ ರೂಪಿಣಿಗೆ 1.5 ಲಕ್ಷ ರೂಪಾಯಿ ವಂಚನೆ!

Tirupati: ತಮಿಳು ಚಿತ್ರರಂಗದ ಪ್ರಸಿದ್ಧ ನಟಿ ರೂಪಿಣಿ ಅವರಿಗೆ ತಿರುಪತಿ (Tirupati) ದೇವಸ್ಥಾನದ ವಿಶೇಷ ದರ್ಶನಕ್ಕೆ ಟಿಕೆಟ್ ನೀಡುವುದಾಗಿ ಹೇಳಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನಟಿ ರೂಪಿಣಿಯವರಿಂದ 1.50 ಲಕ್ಷ ರೂಪಾಯಿ ವಂಚಿಸಲಾಗಿದೆ.
ರೂಪಿಣಿಯವರು ಆಗಾಗ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಕಾರಣ, ಇತ್ತೀಚೆಗೆ ತಮಿಳುನಾಡಿನ ಸರವಣನ್ ಎಂಬ ವ್ಯಕ್ತಿ ರೂಪಿಣಿಯವರನ್ನು ಸಂಪರ್ಕಿಸಿ, ತಿರುಪತಿ ದೇವಸ್ಥಾನದ ವಿಶೇಷ ದರ್ಶನಕ್ಕೆ ಟಿಕೆಟ್ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದ. ಈ ವ್ಯಕ್ತಿಯ ಮಾತನ್ನು ನಂಬಿ 1.50 ಲಕ್ಷ ರೂಪಾಯಿಯನ್ನು ಅವರ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ. ಆದರೆ, ಹಣವನ್ನು ಪಡೆದ ನಂತರ ಸರವಣನ್ ಎಂಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ರೂಪಿಣಿಯವರು ಅವನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಈ ವಂಚನೆಯ ಬಗ್ಗೆ ತಿಳಿದ ನಂತರ, ರೂಪಿಣಿಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸರವಣನ್ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
Comments are closed.