Thalassery: ಒಂದು ಸಣ್ಣ ಮೀನಿನ ಕಡಿತದಿಂದ ಕೇರಳದ ವ್ಯಕ್ತಿಗೆ ಅಪರೂಪದ ಸೋಂಕು,ಅಂಗೈ ಕಟ್!

Thalassery: ಕೇರಳದ ತಲಶ್ಶೇರಿಯ 38 ವರ್ಷದ ವ್ಯಕ್ತಿಯೊಬ್ಬರ ಬಲ ಅಂಗೈಗೆ ಮೀನು ಕಚ್ಚಿದ ಪರಿಣಾಮ, ಗಂಭೀರ ಬ್ಯಾಕ್ಟೀರಿಯಾದ ಸೋಂಕು ಉಂಟಾಗಿ, ವ್ಯಕ್ತಿಯ ಅಂಗೈಯನ್ನು ಕತ್ತರಿಸಬೇಕಾದ ಪರಿಸ್ಥಿತಿ ಬಂದಿತು. ಹೈನುಗಾರ ರಾಜೇಶ್‌ಗೆ ಫೆಬ್ರವರಿ ಆರಂಭದಲ್ಲಿ ಸ್ಥಳೀಯವಾಗಿ ‘ಕಾಡು’ ಎಂಬ ಮೀನು ಕಚ್ಚಿತ್ತು. ಆರಂಭದಲ್ಲಿ ಅವರ ಬೆರಳಿಗೆ ಸಣ್ಣ ಗಾಯವಾಗಿ ಕಂಡು ಬಂದ ಇದು ನಂತರ ಗಂಭೀರ ಮತ್ತು ಮಾರಣಾಂತಿಕ ಪರಿಸ್ಥಿತಿಯನ್ನು ತಂದೊಡ್ಡಿತ್ತು.
ಕೆರೆ ಸ್ವಚ್ಛಗೊಳಿಸುವಾಗ ಮೀನು ಕಚ್ಚಿದ್ದರಿಂದ ಉಂಟಾದ ತೀವ್ರ ನೋವು ನಂತರ ಸೋಂಕು ತಗುಲಿ ಯುವಕನ ಬಲಗೈಯನ್ನು ಕತ್ತರಿಸಬೇಕಾಯಿತು. ಮಡಪ್ಪೀಡಿಕಾ ಬಳಿಯ ಪಾಯಿಕ್ಕಟ್ ಕುಣಿಯಲ್ಲಿ ಈ ಘಟನೆ ನಡೆದಿದ್ದು, ಟಿ. ರಾಜೇಶ್ (38) ಎಂಬ ವ್ಯಕ್ತಿಯ ಮೇಲೆ ಭಾರೀ ಪರಿಣಾಮ ಬೀರಿದೆ.
ಫೆಬ್ರವರಿ 9 ರಂದು, ತನ್ನ ಮನೆಯ ಸಮೀಪವಿರುವ ಸಣ್ಣ ಕೊಳವನ್ನು ಸ್ವಚ್ಛಗೊಳಿಸುತ್ತಿದ್ದಾಗ, ರಾಜೀಶ್ ಅವರಿಗೆ “ಕಾಡು” ಎಂದು ಕರೆಯಲ್ಪಡುವ ಸ್ಥಳೀಯ ಮೀನಿನ ಚೂಪಾದ ಬೆನ್ನುಮೂಳೆಯು ಚುಚ್ಚಿದೆ ಇದು ಬೆಕ್ಕುಮೀನಿನಂತೆಯೇ ಇತ್ತು. ಆದರೆ ರಾಜೇಶ್ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ನೋವು ಉಲ್ಬಣಗೊಂಡಿತು. ಮಾಹಿತಿ ಪ್ರಕಾರ, ಫೆಬ್ರವರಿ 10 ರಂದು ರಾಜೇಶ್‌ಗೆ ಮೀನು ಕಚ್ಚಿದಾಗ, ಅವನು ತುಂಬಾ ನೋವು ಪ್ರಾರಂಭವಾಯಿತು. ಇದಾದ ಬಳಿಕ ನೋವು ಸಹಿಸಲಾಗದೆ ಮರುದಿನ ಪಳ್ಳೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೂ ನೋವು ಕಡಿಮೆಯಾಗದಿದ್ದಾಗ ಹೆಚ್ಚಿನ ಚಿಕಿತ್ಸೆಗಾಗಿ ಮಾಹೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಷ್ಟರಲ್ಲಿ ತೀವ್ರವಾದ ನೋವಿನ ಜೊತೆಗೆ ಬೆರಳುಗಳು ಮತ್ತು ಅಂಗೈಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳತೊಡಗಿದವು. ಇದಾದ ಬಳಿಕ ಕೋಝಿಕ್ಕೋಡ್‌ನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ವೈದ್ಯರು ರೋಗದ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ವಿವರವಾದ ಪರೀಕ್ಷೆಯ ನಂತರ, ವೈದ್ಯರು ಅವರಿಗೆ ಗ್ಯಾಸ್ ಗ್ಯಾಂಗ್ರೀನ್ ಇದೆ ಎಂದು ಕಂಡುಹಿಡಿದರು, ಇದು ಅಪರೂಪದ ಕಾಯಿಲೆಯಾಗಿದೆ. ವರದಿಯ ಪ್ರಕಾರ, ಕೆಸರು ಮತ್ತು ಮರಳಿನ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ರಾಜೇಶ್‌ನ ದೇಹವನ್ನು ಪ್ರವೇಶಿಸಿದ್ದು ಮತ್ತು ಇದು ರೋಗಕ್ಕೆ ಕಾರಣವಾಯಿತು. ವೈದ್ಯರು ಆರಂಭದಲ್ಲಿ ಎರಡು ಬೆರಳುಗಳನ್ನು ಕತ್ತರಿಸಿದ್ದರೂ, ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.
ಸೋಂಕು ಹರಡುತ್ತಿದ್ದಂತೆ, ಅವನು ತನ್ನ ಸಂಪೂರ್ಣ ಅಂಗೈಯನ್ನು ಕತ್ತರಿಸಬೇಕಾಯಿತು. ಈ ಕಾಯಿಲೆ ಇರುವ ಕೇರಳದ ಇಬ್ಬರಲ್ಲಿ ರಾಜೇಶ್ ಒಬ್ಬರು. ಇದು ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುವ ಸೋಂಕು. ಏತನ್ಮಧ್ಯೆ, ಗ್ಯಾಸ್ ಗ್ಯಾಂಗ್ರೀನ್‌ಗೆ ಕಾರಣವಾದ ಬ್ಯಾಕ್ಟೀರಿಯಾಗಳು ಕೆಸರಿನ ನೀರಿನಲ್ಲಿ ಬೆಳೆಯುವುದರಿಂದ ಎಚ್ಚರಿಕೆ ವಹಿಸುವಂತೆ ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮಣ್ಣಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಲೋಸ್ಟ್ರಿಡಿಯಮ್ ಮತ್ತು ಕ್ಲೆಬ್ಸಿಯೆಲ್ಲಾ ಬ್ಯಾಕ್ಟೀರಿಯಾಗಳಿಂದ ಈ ಸೋಂಕು ಉಂಟಾಗಿದೆ. ಈ ಬ್ಯಾಕ್ಟೀರಿಯಾಗಳು ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತವೆ.
ವರದಿ ಪ್ರಕಾರ, ರಾಜೇಶ್ ಅವರು ಗ್ಯಾಸ್ ಗ್ಯಾಂಗ್ರೀನ್ ಗೆ ಒಳಗಾದರು. ಇದನ್ನು ಕ್ಲೋಸ್ಟ್ರಿಡಿಯಲ್ ಮಯೋನೆಕ್ರೊಸಿಸ್ ಎಂದೂ ಕರೆಯುತ್ತಾರೆ. ಇದು ಗಂಭೀರವಾದ ಮತ್ತು ಮಾರಣಾಂತಿಕ ಬ್ಯಾಕ್ಟೀರಿಯಾ. ಇದರ ಸೋಂಕಿನಿಂದ ಅಂಗಾಂಶವನ್ನು ನಾಶಪಡಿಸುತ್ತದೆ ಮತ್ತು ಅದರೊಳಗೆ ಅನಿಲವನ್ನು ಸೃಷ್ಟಿಸುತ್ತದೆ. ಅದೇ ಬ್ಯಾಕ್ಟೀರಿಯಾದ ಸೋಂಕು ಆತನ ಅಂಗೈಗೆ ಹರಡಿತು. ಆದರೆ ಇದರಿಂದ ಸಮಸ್ಯೆ ಇನ್ನೂ ಹೆಚ್ಚಾಗಬಹುದು ಎನ್ನುವ ಸಂಶಯವು ವೈದ್ಯರಿಗಿತ್ತು. ಈ ಸ್ಥಿತಿಯು ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಪರಿಣಾಮ ಬೀರುತ್ತದೆ. ಆರಂಭದಲ್ಲಿ, ಅವರ ಎರಡು ಬೆರಳುಗಳನ್ನು ಕತ್ತರಿಸಲಾಯಿತು, ಆದರೆ ಸೋಂಕು ಕಡಿಮೆಯಾಗದ ಕಾರಣ, ವೈದ್ಯರಿಗೆ ಅವರ ಸಂಪೂರ್ಣ ಕೈಯನ್ನು ತೆಗೆದುಹಾಕುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ.
Comments are closed.