KPSC ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆ !!

KPSC: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪರೀಕ್ಷೆಗಳು ಇತ್ತೀಚಿಗೆ ಅವ್ಯವಸ್ಥೆಯ ಆಗರಗಳಾಗಿ ಬಿಟ್ಟಿವೆ. ಎಷ್ಟೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದರು ಕೂಡ ಹೊಸ ಹೊಸ ಸಮಸ್ಯೆಗಳು ಇದರಲ್ಲಿ ಹುಟ್ಟಿಕೊಳ್ಳುತ್ತಿವೆ. ಭಾಷಾಂತರದಲ್ಲಿನ ತೊಡಕು ಇತ್ಯಾದಿ ಲೋಪದೋಷಗಳು ಪ್ರತಿ ಸಮಸ್ಯೆಯನ್ನು ಕಣ್ಣಿಗೆ ರಾಚುತ್ತಿವೆ. ಈ ಹಿನ್ನೆಲೆಯಲ್ಲಿ ಭಾರೀ ಟೀಕೆಗಳಿಗೆ ಕೆಪಿಎಸ್ಸಿ ಗುರಿಯಾಗಿದೆ. ಈಗ ಸದನದಲ್ಲೂ ಕೆಪಿಎಸ್ಸಿ ಅವಾಂತರಗಳ ಬಗ್ಗೆ ಪ್ರತಿಪಕ್ಷಗಳೂ ಧ್ವನಿ ಎತ್ತಿವೆ. ಹೀಗಾಗಿ ಸರ್ಕಾರವು KPSC ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ.
ಹೌದು, ಕೆಪಿಎಸ್ಸಿ ಕುರಿತಾದ ಸುಧಾರಣೆಯ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೆಪಿಎಸ್ಸಿ ಸುಧಾರಣಾ ಕ್ರಮಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು:
* ಕೆಪಿಎಸ್ಸಿ ಪರೀಕ್ಷೆ, ಆಡಳಿತ ಸುಧಾರಣೆಗೆ ಪ್ರತ್ಯೇಕ ಸಮಿತಿ ರಚನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
* ಸಮಿತಿ ಶಿಫಾರಸು ಪಾಲನೆ ಮಾಡುವೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
* ಒಟ್ಟಾರೆ ಕೆಪಿಎಸ್ಸಿಯ ಸಮಗ್ರ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಒತ್ತು ನೀಡಿ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದಿದೆ.
*ಮುಂದಿನ ಅಧಿವೇಶನದ ವೇಳೆಗೆ ಕೆಪಿಎಸ್ಸಿ ಸುಧಾರಣೆಗೆ ಸಂಬಂಧಿಸಿದ ವಿಧೇಯಕ ಮಂಡನೆ ಸಾಧ್ಯತೆ ಇದೆ.
Comments are closed.