Ration Card: ರಾಜ್ಯದ ʼಪಡಿತರ ಚೀಟಿʼದಾರರೇ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮಾ.31 ರವರೆಗೆ ಅವಕಾಶ!

Share the Article

Ration Card: ಪಡಿತರ ಚೀಟಿದಾರರು ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವನ್ನು ಆಹಾರ ಇಲಾಖೆ ಮಾ.31 ರವರೆಗೆ ವಿಸ್ತರಣೆ ಮಾಡಿದೆ. ತಿದ್ದುಪಡಿ ಮಾಡಿಕೊಳ್ಳುವವರು ಸಮೀಪದ ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ರೇಷನ್‌ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆಗೆ ಆಧಾರ್‌ ಜೊತೆ ಆದಾಯ ಪ್ರಮಾಣ ಪತ್ರ ನೀಡಬೇಕು. ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್‌ ನಂಬರ್‌ ಜೋಡಣೆಯಾಗಿರುವ ಆಧಾರ್‌ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ.

ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್‌ ಬಿಲ್ಲಿನಲ್ಲಿ ನಮೂದು ಮಾಡಿರುವ ವಿದ್ಯುತ್‌ ಮೀಟರ್‌ ಆರ್‌ಆರ್‌ ಸಂಖ್ಯೆ ಮತ್ತು ಲೋಕೇಷನ್‌ ಕೋಡ್‌ ನೀಡುವುದು ಕಡ್ಡಾಯವಾಗಿದೆ.

ಅಪ್‌ಡೇಟ್‌ ಮಾಡಲು ಏನಿದೆ?

ವಿಳಾಸ ಬದಲಾವಣೆ, ಕುಟುಂಬಕ್ಕೆ ಸೇರಿದವರ ಹೆಸರು ತೆಗೆಯುವುದು, ಫೋಟೋ ಮತ್ತು ಬಯೋಮೆಟ್ರಿಲ್‌ ಅಪ್ಡೇಟ್‌, ಕುಟುಂಬ ಸದಸ್ಯರ ಹೆಸರು ತಿದ್ದುಪಡಿ, ಮನೆ ಯಜಮಾನರ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ.

Comments are closed.