Prostitution: ಸ್ಟಾರ್ ಹೋಟೆಲ್ ವೇಶ್ಯಾವಾಟಿಕೆ ಜಾಲ: ನಾಲ್ವರು ನಟಿಯರ ರಕ್ಷಣೆ

Prostitution: ವಾಣಿಜ್ಯ ನಗರಿ ಮುಂಬೈ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆಯನ್ನು ಮುಂಬೈ ಪೊಲೀಸರು ಭೇದಿಸಿದ್ದು ನಾಲ್ವರು ನಟಿಯರನ್ನು ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಿದ್ದಾರೆ.
ಸಿನಿಮಾ ಧಾರಾವಾಹಿಗಳಲ್ಲಿ ನಟಿಸುವ ಉದ್ದೇಶದಿಂದ ಮುಂಬೈಗೆ ಬಂದಿದ್ದು, ಸರಿಯಾದ ಕೆಲಸ ಸಿಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ತಾವು ದೇಹ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಈ ನಾಲ್ವರು ತರುಣಿಯರು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.
ಮುಂಬೈಯ ಪೂವೈ ನಗರದ ಹೊಟೇಲ್ ವೊಂದರಲ್ಲಿ ಹೈ ಪ್ರೊಪೈಲ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಪೊಲೀಸರಿಗೆ ದೊರೆತಿತ್ತು. 60ವರ್ಷದ ಶ್ಯಾಮ್ ಸುಂದರ್ ಆರೋರಾ ಪಿಂಪ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ಯಾಮ್ ಸುಂದರ್ ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಹಾಗೂ ಪ್ರತಿ ಯುವತಿಗೆ 50 ಸಾವಿರದಿಂದ ಒಂದು ಲಕ್ಷದವರೆಗೆ ಚಾರ್ಜ್ ಮಾಡುತ್ತಿದ್ದ ಎನ್ನಲಾಗಿದೆ.
Comments are closed.