Karkala: ಮುಂಡ್ಕೂರು ಜಾರಿಗೆಕಟ್ಟೆ ಬಳಿ ಮೋಟಾರ್ ಸೈಕಲ್‌ಗೆ ಪಿಕ್ ಅಪ್ ಡಿಕ್ಕಿ

Share the Article

Karkala: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಬಳಿ ಮೋಟಾರ್ ಸೈಕಲ್‌ಗೆ ಪಿಕ್ ಅಪ್ ವಾಹನ ಡಿಕ್ಕಿಯಾದ ಘಟನೆ ಮಾ. 13ರಂದು ನಡೆದಿದೆ.

ಕಾಪು ತೆಂಕ ಬಡಾ ಗ್ರಾಮದ ಹಸನ್ ಮೋಶಿನ್ (22) ಎಂಬವರು ಯಮಾಹಾ ಮೋಟಾರ್ ಸೈಕಲ್‌ನ್ನು ಸಚ್ಚೇರಿಪೇಟೆ ಕಡೆಯಿಂದ ಮುಂಡ್ಕೂರು ಕಡೆಗೆ ಬರುತ್ತಾ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಬಳಿ ಮಹೇಂದ್ರ ಪಿಕ್ ಅಪ್ ವಾಹನವನ್ನು ಚಾಲಕ ಜೈನುಲ್ ಅಬಿದೀನ್ ಸಂಕಲಕರಿಯ ಕಡೆಯಿಂದ ಸಚ್ಚೇರಿಪೇಟೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಚಲಾಯಿಸಿ ಮೋಟಾರ್ ಸೈಕಲ್‌ಗೆ ಮುಂದಿನಿಂದ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Comments are closed.