Mangaluru : ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಬಾಲಕ ಸಾವು!!

Mangaluru : ಅಪಾರ್ಟ್‌ಮೆಂಟ್ ವೊಂದರ ಮಹಡಿಯಿಂದ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಮಂಗಳೂರಿನ ನಗರದ ಮೇರಿಹಿಲ್ ನಲ್ಲಿ ಶನಿವಾರ (ಮಾ.15) ನಡೆದಿದೆ.
ಇರಾ ಕಿನ್ನಿಮಜಲು ಬೀಡು ಸುದೇಶ್ ಭಂಡಾರಿ ಅವರ ಪುತ್ರ, 6ನೇ ತರಗತಿ ವಿದ್ಯಾರ್ಥಿ ಸಮರ್ಜಿತ್ (12) ಮೃತಪಟ್ಟ ಬಾಲಕ. ಶನಿವಾರ ಮುಂಜಾನೆ ಯಾವುದೋ ಕಾರಣಕ್ಕೆ ಸ್ನೇಹಿತರೊಂದಿಗೆ ವಸತಿ ಸಮುಚ್ಚಯದ ಮಹಡಿಗೆ ತೆರಳಿದ್ದು, ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
Comments are closed.