Mangaluru: ಅಕ್ರಮವಾಗಿ ಗೋ ಸಾಗಾಟ ಪತ್ತೆ; 100 ಕೆಜಿಗೂ ಅಧಿಕ ದನದ ಮಾಂಸ ಪತ್ತೆ!

Share the Article

Mangaluru: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಘಟನೆ ಇಂದು (ಮಾ.15) ಶನಿವಾರ ನಡೆದಿದೆ. ಈ ಘಟನೆ ಕುಲಶೇಖರ, ಕೈಕಂಬ ಬಳಿ ನಡೆದಿದೆ.

ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದು, ಸ್ಕೂಟರ್‌ನಲ್ಲಿ 100 ಕೆಜಿಗೂ ಅಧಿಕ ದನದ ಮಾಂಸ ಸಾಗಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ. ಭಜರಂಗದಳ ಕಾರ್ಯಕರ್ತರು ಸ್ಕೂಟರನ್ನು ತಡೆಯುತ್ತಿದ್ದಂತೆ ಸವಾರ ಸ್ಕೂಟರ್‌ ಬಿಟ್ಟು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಘಟನೆ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Comments are closed.