Tollywood: ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಡೇವಿಡ್‌ ವಾರ್ನರ್‌

Tollywood News: ಆಸೀಸ್‌ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಅವರು ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ವಾರ್ನರ್‌ ಅವರ ಫಸ್ಟ್‌ ಲುಕ್‌ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ʼಮೈದಾನದಲ್ಲಿ ಮಿಂಚಿದವರು ಬೆಳ್ಳಿ ತೆರೆಯ ಮೇಲೆ ಮಿಂಚುವ ಕಾಲ ಬಂದಿದೆ; ಎಂದು ಬರೆಯಲಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಾರ್ನರ್‌, ʼಚಿತ್ರದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆʼ ಎಂದು ಹೇಳಿದ್ದಾರೆ. ವೆಂಕಿ ಕುಡುಮುಲ ನಿರ್ದೇಶನದ ʼರಾಬಿನ್‌ಹುಡ್‌ʼ ಚಿತ್ರವನ್ನು ʼಮೈತ್ರಿ ಮೂವಿ ಮೇಕರ್ಸ್‌ʼ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ನಿತಿನ್‌, ನಾಯಕಿಯಾಗಿ ಶ್ರೀ ಲೀಲಾ ನಟನೆ ಮಾಡುತ್ತಿದ್ದಾರೆ.

Comments are closed.