BJP Leader: ಹೋಳಿ ಆಡಿ ಬಂದ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ!

BJP Leader: ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ಬಿಜೆಪಿ ಮುಖಂಡ ಮತ್ತು ಮುಂಡ್ಲಾನಾ ಮಂಡಲ್‌ ಅಧ್ಯಕ್ಷ ಸುರೇಂದ್ರ ಜವಾಹ್ರಾ ಅವರನ್ನು ಹರಿಯಾಣದ ಸೋನಿಪತ್ನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ (ಮಾ.14) ಶುಕ್ರವಾರ ಹತ್ಯೆ ಮಾಡಲಾಗಿದೆ.

ತಡರಾತ್ರಿ ನೆರೆಹೊರೆಯವರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆರೋಪಿಗಳು ಮೂರು ಸುತ್ತು ಗುಂಡು ಹಾರಿಸಿ ಸುರೇಂದ್ರ ಜವಾಹ್ರಾ ಅವರನ್ನು ಕೊಂದಿದ್ದಾರೆ. ಜುವಾಹ್ರಾ ಅವರು ತಮ್ಮ ಕುಟುಂಬ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಹೋಳಿ ಆಡಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದ್ದಾರೆ. ಆ ಸಂದರ್ಭದಲ್ಲಿ ನೆರೆಹೊರೆಯವರು ವಾಗ್ವಾದ ಮಾಡಿದ್ದಾರೆ. ನಂತರ ಪಿಸ್ತೂಲ್‌ ಹಿಡಿದು ಅವರನ್ನು ಬೆನ್ನಟ್ಟಿದ್ದು, ಪಕ್ಕದ ಅಂಗಡಿಯೊಂದರಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.

Comments are closed.